newsics.com
ಸಾಂಗ್ಲಿ(ಮಹಾರಾಷ್ಟ್ರ): ಡಿಸೆಂಬರ್ 22ರಂದು ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲಮಂಗಲದ ಬಳಿ ವೋಲ್ವೋ ಕಾರಿನ ಮೇಲೆ ಕಂಟೇನರ್ ಬಿದ್ದು ಒಂದೇ ಕುಟುಂಬದ 6 ಮಂದಿ ಸಾವನ್ನಪ್ಪಿದ್ದರು. ಈ ಸಾವುಗಳಿಂದ ತೀವ್ರ ಆಘಾತಗೊಂಡಿದ್ದ ಚಂದ್ರಮ್ ಅವರ ತಂದೆ ಈರಗೊಂಡ ಏಗಪ್ಪಗೊಳ ಶನಿವಾರ ಸಂಜೆ ಅಸುನೀಗಿದ್ದಾರೆ.
ಮೃತ ಚಂದ್ರಮ್ ತಂದೆ ಈರಗೊಂಡ ಏಗಪ್ಪಗೊಳ ತನ್ನ ಮಕ್ಕಳು, ಮೊಮ್ಮಕ್ಕಳ ಸಾವಿನ ಬಳಿಕ ತೀವ್ರವಾಗಿ ಆಘಾತಗೊಂಡಿದ್ದು 80 ವರ್ಷದ ಈರಗೊಂಡ ಏಗಪ್ಪಗೊಳ ಅವರು ಕೊನೆಯುಸಿರೆಳೆದರು.
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಮೊರಬಗಿಯಲ್ಲಿ ಈರಗೊಂಡ ಏಗಪ್ಪಗೊಳ ಮೃತಪಟ್ಟಿದ್ದಾರೆ. ಕುಟುಂಬಸ್ಥರ ಸಾವಿನ ಬಳಿಕ ಈರಗೊಂಡ ಅವರು ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಅಲ್ಲದೆ, ದೀರ್ಘಕಾಲದ ಅನಾರೋಗ್ಯ ಕೂಡ ಅವರನ್ನು ಕಂಗೆಡಿಸಿತ್ತು.
ಚಂದ್ರಮ್ ಅವರ ಪತ್ನಿ ಗೌರಾಬಾಯಿ, ಮಕ್ಕಳಾದ ದೀಕ್ಷಾ, ಧ್ಯಾನ್, ತಂಗಿಯಾದ ವಿಜಯಲಕ್ಷ್ಮಿ ಹಾಗೂ ಆಕೆಯ 6 ವರ್ಷದ ಪುತ್ರಿ ಆರ್ಯಾ ಕಂಟೇನರ್ ಅಡಿ ಸಿಲುಕಿ ಮೃತಪಟ್ಟಿದ್ದರು.
Viagra effect ವಯಾಗ್ರಾ ಮತ್ತು: ರಾತ್ರಿಯಿಡೀ ಅಪ್ರಾಪ್ತ ಸ್ನೇಹಿತೆ ಜತೆ ಲೈಂಗಿಕ ಕಸರತ್ತು, ಬಾಲಕಿ ಜೀವಕ್ಕೆ ಕುತ್ತು
Relationship Tips ಚಳಿಗಾಲದಲ್ಲಿ ದೈಹಿಕ ಸಂಪರ್ಕ ಎಷ್ಟು ಹಿತಕರ? ತಜ್ಞರು ಏನಂತಾರೆ?