newsics.com
ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಮತ್ತೆ ಕಳಪೆ ಪಟ್ಟಕ್ಕೇರಿದ್ದಾರೆ. ಈ ವಾರ ಅವರು ತಾವು ಮಾಡಿದ ತಪ್ಪಿನಿಂದ ಈ ರೀತಿಯ ತೊಂದರೆ ಅನುಭವಿಸಿದ್ದಾರೆ. ಮತ್ತೊಂದು ಕಡೆ ಭವ್ಯಾ ಗೌಡ ಅವರು ಕ್ಯಾಪ್ಟನ್ ಆಗಿದ್ದಾರೆ. ಈಗ ರಿಲೀಸ್ ಆದ ಪ್ರೋಮೋಗಳಲ್ಲಿ ಈ ವಿಚಾರಗಳು ಹೈಲೈಟ್ ಆಗಿವೆ.
https://www.instagram.com/reel/DDyFqVcJ3ci/?igsh=MWxxYnhlOTYyampvdw==
ಹೌದು, ಬಿಗ್ಬಾಸ್ ಮನೆಯಲ್ಲಿ ಉತ್ತಮ ಮತ್ತು ಕಳಪೆ ಚಟುವಟಿಕೆಗಳು ನಡೆದಿವೆ. ಈಗಾಗಲೇ ಅನೇಕ ಬಾರಿ ಬಿಗ್ಬಾಸ್ ಮನೆಯ ಜೈಲು ಸೇರಿದ್ದ ಚೈತ್ರಾ ಕುಂದಾಪುರ ಮತ್ತೆ ಕಂಬಿ ಹಿಂದೆ ಹೋಗಿದ್ದಾರೆ.
ಬಹುತೇಕ ಸ್ಪರ್ಧಿಗಳು ಕಳಪೆಗೆ ಚೈತ್ರಾ ಕುಂದಾಪುರ ಹೆಸರನ್ನೇ ತೆಗೆದುಕೊಂಡಿದ್ದಾರೆ. ಹೀಗಾಗಿ ಚೈತ್ರಾ ಕುಂದಾಪುರ ಮತ್ತೆ ಜೈಲು ಸೇರಿದ್ದಾರೆ. ಇನ್ನು ಕಳಪೆ ನೀಡುವ ವೇಳೆ ಎಂದಿನಂತೆ ಮಾತಿನ ಸಮರಗಳು ನಡೆದಿವೆ. ವಿಶೇಷವಾಗಿ ಚೈತ್ರಾ ಕುಂದಾಪುರಗೆ ಹನಮಂತು ಟಾಂಗ್ ನೀಡಿದ್ದಾರೆ.
ಕಳಪೆ ಕೊಡಲು ನಾನು ಯಾರನ್ನೂ ಟಾರ್ಗೆಟ್ ಮಾಡಿಲ್ಲ. ನೀನು ನನ್ನ ದೊಡ್ಡಪ್ಪನ ಮಗಳು, ಅತ್ತೆ ಮಗಳು ಅಲ್ಲ ಎಂದು ಡೈಲಾಗ್ ಹೊಡೆದಿದ್ದಾರೆ. ಇನ್ನು ಮುಂದಿನ ವಾರಕ್ಕೆ ಯಾರು ನಾಯಕರಾಗುತ್ತಾರೆ ಅನ್ನೋದು ಕೂಡ ರಿವೀಲ್ ಆಗಿದೆ. ಆದರೆ ಬಿಗ್ಬಾಸ್ ಅಧಿಕೃತವಾಗಿ ಇನ್ನೂ ಘೋಷಣೆ ಮಾಡಿಲ್ಲ. ಭವ್ಯ ಗೌಡ ಬಿಗ್ಬಾಸ್ ಮನೆಗೆ ಕ್ಯಾಪ್ಟನ್ ಆಗಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11’ರ 12ನೇ ವಾರದಲ್ಲಿ ಚೈತ್ರಾ ಅವರು ಕಳಪೆ ಪಟ್ಟ ಪಡೆದಿದ್ದಾರೆ. ಕಳೆದ ವಾರವೂ ಅವರು ಕಳಪೆ ಪಡೆದು ಜೈಲು ಸೇರಿದ್ದರು. ಈಗ ಮತ್ತೊಮ್ಮೆ ಅವರು ಜೈಲಿಗೆ ಹೋಗಿದ್ದಾರೆ. ಅತ್ತ ಭವ್ಯಾ ಗೌಡ ಅವರು ಟಾಸ್ಕ್ ಗೆದ್ದು ಕ್ಯಾಪ್ಟನ್ ಆಗಿದ್ದಾರೆ. ಈಗ ರಿಲೀಸ್ ಆಗಿರುವ ಪ್ರೋಮೋಗಳಲ್ಲಿ ಈ ವಿಚಾರ ಹೈಲೈಟ್ ಆಗಿದೆ.