newsics.com
ಚೆನ್ನೈ: ಹಬ್ಬದಡುಗೆ ತಯಾರಿಸಲು 19 ಕಾಗೆಗಳನ್ನು ಕೊಂದಿರುವ ಘಟನೆ ತಮಿಳುನಾಡಿನ ತಿರುವಳ್ಳೂರಿನಲ್ಲಿ ನಡೆದಿದೆ.
ತಿರುವಳ್ಳೂರು ಜಿಲ್ಲೆಯ ನಾಯಪ್ಪಕ್ಕಂ ಮೀಸಲು ಪ್ರದೇಶದ ಬಳಿಯ ತಿರುಪಕ್ಕಂ ಎಂಬ ಗ್ರಾಮದಲ್ಲಿ ವಾಸವಿದ್ದ ರಮೇಶ್ ಮತ್ತು ಭೂಚಮ್ಮ ದಂಪತಿ ಕಾಗೆಗಳನ್ನು ಸಾಯಿಸುತ್ತಿರುವ ಬಗ್ಗೆ ಅರಣ್ಯ ಇಲಾಖೆಗೆ ಸುಳಿವು ಸಿಕ್ಕಿತ್ತು. ಇದರ ಆಧಾರದ ಮೇಲೆ ಅವರ ಮನೆಯಲ್ಲಿ ಶೋಧ ನಡೆಸಿದಾಗ 19 ಸತ್ತ ಕಾಗೆಗಳು ಪತ್ತೆಯಾಗಿವೆ.
ರಮೇಶ್ ಮತ್ತು ಭೂಚಮ್ಮನನ್ನು ವಿಚಾರಣೆಗೊಳಪಡಿಸಿದಾಗ ಹಬ್ಬದಂದು ಮಾಂಸಕ್ಕಾಗಿ ಕಾಗೆಗಳನ್ನು ಕೊಂದಿರುವುದು ಬೆಳಕಿಗೆ ಬಂದಿದೆ. ಈ ಜೋಡಿ ಬೆಕ್ಕು, ಕಾಗೆ, ನಾಯಿ ಮುಂತಾದ ಪ್ರಾಣಿಗಳನ್ನು ಕೊಂದು ಮಾರಾಟ ಮಾಡುತ್ತಿರುವ ದಂಧೆಯಲ್ಲಿರುವ ಸಾಧ್ಯತೆ ಇದೆ ಎಂದೂ ವರದಿಯಾಗಿದೆ.
ಕೀಟನಾಶಕಗಳನ್ನು ಆಹಾರಕ್ಕೆ ಸೇರಿಸಿ ಈ ಕಾಗೆಗಳನ್ನು ಕೊಂದಿರಬಹುದು ಎಂದು ಅರಣ್ಯ ಇಲಾಖೆ ಶಂಕೆ ವ್ಯಕ್ತಪಡಿಸಿದೆ. ಹೀಗಾಗಿ ಆ ಭಾಗದ ಎಲ್ಲ ಅಂಗಡಿಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ.
ದಂಪತಿಗೆ 4 ಹೆಣ್ಣು ಮಕ್ಕಳು ಮತ್ತು ಓರ್ವ ಮಗ ಇದ್ದು, ಮನೆಯಲ್ಲಿ 7 ಜನರು ವಾಸಿಸುತ್ತಿದ್ದು, ಕುಟುಂಬವು ಆರ್ಥಿಕವಾಗಿ ಹಿಂದುಳಿದಿರುವ ಕಾರಣ ಬಡತನದಿಂದ ಈ ಕೃತ್ಯದಲ್ಲಿ ಭಾಗಿಯಾಗಿರಬಹುದು ಎಂದು ಅರಣ್ಯ ಇಲಾಖೆ ಶಂಕಿಸಿದೆ.
ಈ ವೇಳೆ ಕಾಗೆಗಳನ್ನು ಕೊಂದಿರುವ ಘಟನೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಆರೋಗ್ಯ ಕಾರ್ಯದರ್ಶಿ ಸುಪ್ರಿಯಾ ಸಾಹು ತಿಳಿಸಿದ್ದಾರೆ.
ಇದರ ಬೆನ್ನಲ್ಲೇ ಅರಣ್ಯಾಧಿಕಾರಿಗಳು ದಂಪತಿಗೆ ಐದು ಸಾವಿರ ರೂ. ದಂಡ ವಿಧಿಸಿದ್ದಲ್ಲದೆ ಗಂಭೀರ ಎಚ್ಚರಿಕೆ ನೀಡಿದ್ದಾರೆ.
Effect of cold weather ಮದುವೆಗೂ ತಟ್ಟಿದ ಚಳಿ ಪರಿಣಾಮ: ವರನಿಗೆ ಕಾಡಿದ ಅನಾರೋಗ್ಯ, ವಧುವಿಗೆ ಅಷ್ಟೇ ಸಾಕಾಯ್ತು…
PM Modi 43 ವರ್ಷಗಳ ಬಳಿಕ ಕುವೈತ್ ಗೆ ಭೇಟಿ ನೀಡಲಿದ್ದಾರೆ ಪ್ರಧಾನಿ ಮೋದಿ
ಅಮೆರಿಕಾದಲ್ಲಿ ಶಸ್ತ್ರಚಿಕಿತ್ಸೆ: ಶಿವರಾಜ್ ಕುಮಾರ್‌ಗೆ ಸುದೀಪ್ ಸೇರಿ ಹಲವರ ಶುಭ ಹಾರೈಕೆ
Money Laundering fraud ಮನಿ ಲಾಂಡರಿಂಗ್ ಆರೋಪ: ಸಿಬಿಐ ಹೆಸರಲ್ಲಿ ಬೆಂಗಳೂರಿನ ವೃದ್ಧೆಗೆ 1.24 ಕೋಟಿ ರೂ. ವಂಚನೆ