newsics.com
ಬೆಂಗಳೂರು: ಮನಿ ಲಾಂಡರಿಂಗ್ ಆರೋಪದಡಿ ಸಿಬಿಐನಲ್ಲಿ ಪ್ರಕರಣ ದಾಖಲಾಗಿದೆ ಎಂದು ನಂಬಿಸಿ ವೃದ್ಧೆಯೊಬ್ಬರಿಗೆ 1.24 ಕೋಟಿ ವಂಚಿಸಿರುವ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ.
83 ವರ್ಷದ ವೃದ್ಧೆಯೊಬ್ಬರು ನೀಡಿರುವ ದೂರಿನನ್ವಯ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ವೃದ್ಧೆಗೆ ಕರೆ ಮಾಡಿದ್ದ ವಂಚಕರು, ಅವರಿಂದಲೇ ಬ್ಯಾಂಕ್ ಖಾತೆಯ ಮಾಹಿತಿಗಳನ್ನು ಪಡೆದು ಖಾತೆಯಿಂದ ಹಂತ ಹಂತವಾಗಿ 1.24 ಕೋಟಿ ರೂ. ಹಣವನ್ನು ವರ್ಗಾಯಿಸಿಕೊಂಡಿದ್ದಾರೆ.
ದೂರುದಾರರಿಗೆ ಅಕ್ಟೋಬರ್‌ನಲ್ಲಿ ಕರೆ ಮಾಡಿದ್ದ ವಂಚಕರು ಮುಂಬೈ ಪೊಲೀಸರ ಸೋಗಿನಲ್ಲಿ ಮಾತನಾಡಿ, “ನಿಮ್ಮ ಹೆಸರಿನಲ್ಲಿ ಇನ್ನೊಂದು ನಂಬರ್‌ನಲ್ಲಿ ಕಾನೂನುಬಾಹಿರ ಚಟುವಟಿಕೆಗಳು ಹಾಗೂ ಮನಿ ಲಾಂಡರಿಂಗ್ ಮಾಡಲಾಗುತ್ತಿದೆ. ಸಿಬಿಐನ ಅಧಿಕಾರಿಗಳು ನಿಮ್ಮನ್ನು ಸಂಪರ್ಕಿಸಲಿದ್ದಾರೆ” ಎಂದು ಬೆದರಿಸಿದ್ದಾರೆ.
ಬಳಿಕ ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿದ್ದ ವಂಚಕರು, “ನಿಮ್ಮ ವಿರುದ್ಧ ಎಫ್ಐಆರ್ ದಾಖಲಾಗಿದೆ. ನಿಮ್ಮ ಬ್ಯಾಂಕ್ ಖಾತೆಯ ಪರಿಶೀಲನೆ ಮಾಡಬೇಕಿದೆ. ನಾವು ಕೇಳಿದ ವಿವರಗಳನ್ನು ನೀಡಬೇಕು” ಎಂದಿದ್ದಾರೆ.
ದೂರುದಾರರ ಬ್ಯಾಂಕ್ ಖಾತೆ ಸೇರಿದಂತೆ ಮತ್ತಿತರ ವಿವರಗಳನ್ನು ಪಡೆದು, ತನಿಖಾ ಪ್ರಕ್ರಿಯೆಯ ಹೆಸರಿನಲ್ಲಿ ವಾಪಸ್ ವರ್ಗಾವಣೆ ಮಾಡುವುದಾಗಿ ಹಂತ ಹಂತವಾಗಿ 1.24 ಕೋಟಿ ಹಣ ವರ್ಗಾಯಿಸಿಕೊಂಡಿದ್ದಾರೆ.
ಎರಡು ತಿಂಗಳುಗಳಾದರೂ ಮತ್ತೆ ತನ್ನನ್ನು ಯಾರೂ ಸಂಪರ್ಕಿಸದ ಹಿನ್ನೆಲೆಯಲ್ಲಿ ಅನುಮಾನಗೊಂಡು ಪರಿಶೀಲಿಸಿದಾಗ ದೂರುದಾರರಿಗೆ ತಾವು ವಂಚನೆಗೊಳಗಾಗಿರುವುದು ತಿಳಿದಿದೆ.
ವಂಚನೆಗೊಳಗಾದ ವೃದ್ಧೆ ನೀಡಿದ ದೂರಿನನ್ವಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Immoral relationship ಅನೈತಿಕ ಸಂಬಂಧ ಬಹಿರಂಗ: ಭಯದಿಂದ ವಿವಾಹಿತರಿಬ್ಬರು ಆತ್ಮಹ*ತ್ಯೆ
Dinga Dinga Disease ಈ ಹೊಸ ವೈರಸ್‌ಗೆ ಮಹಿಳೆಯರೇ ಟಾರ್ಗೆಟ್; ಈ ರೋಗ ಎಷ್ಟು ಅಪಾಯಕಾರಿ?
Actor Shivarajkumar ಅನಾರೋಗ್ಯದ ಹಿನ್ನೆಲೆ ಇಂದು ಅಮೆರಿಕಕ್ಕೆ ತೆರಳಲಿರುವ ನಟ ಶಿವರಾಜ್ ಕುಮಾರ್