Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Effect of cold weather ಮದುವೆಗೂ ತಟ್ಟಿದ ಚಳಿ ಪರಿಣಾಮ: ವರನಿಗೆ ಕಾಡಿದ ಅನಾರೋಗ್ಯ, ವಧುವಿಗೆ ಅಷ್ಟೇ ಸಾಕಾಯ್ತು…
ದೇಶ

Effect of cold weather ಮದುವೆಗೂ ತಟ್ಟಿದ ಚಳಿ ಪರಿಣಾಮ: ವರನಿಗೆ ಕಾಡಿದ ಅನಾರೋಗ್ಯ, ವಧುವಿಗೆ ಅಷ್ಟೇ ಸಾಕಾಯ್ತು…

Share
1 Min Read
SHARE

newsics.com

ಜಾರ್ಖಂಡ್: ದಿಯೋಗಢದಲ್ಲಿ ವಿಪರೀತ ಚಳಿಯಿಂದಾಗಿ ಮದುವೆಯೊಂದು ರದ್ದಾಗಿದೆ.

ಭಾರೀ ಚಳಿಯಿಂದಾಗಿ ವರ ಮದುವೆ ಮಂಟಪದಲ್ಲೇ ಮೂರ್ಛೆ ಹೋಗಿದ್ದ. ಇದೇ ಕಾರಣವನ್ನಿಟ್ಟುಕೊಂಡು ವಧು ಮದುವೆಯನ್ನೇ ರದ್ದುಗೊಳಿಸಿದ್ದಾಳೆ.

ಡಿಸೆಂಬರ್ 15ರಂದು ದಿಯೋಗಢದ ಘೋರ್ಮಾರಾದಲ್ಲಿ ವರ ಆರ್ನವ್ ಬಿಹಾರದ ಭಾಗಲ್‌ಪುರದ ಅಂಕಿತಾ ಅವರನ್ನು ವಿವಾಹವಾಗಬೇಕಿತ್ತು. ಅನಾರೋಗ್ಯದ ಕಾರಣ ಚಳಿಯನ್ನು ತಡೆದುಕೊಳ್ಳಲಾರದೆ ಮೂರ್ಛೆ ಹೋಗಿದ್ದರು. ಆದರೆ ವಧು ಇದೇ ಕಾರಣಕ್ಕೆ ಮದುವೆಯನ್ನೇ ರದ್ದುಗೊಳಿಸಿದ್ದಾಳೆ.

ಸ್ಥಳೀಯ ಪಟ್ಟಣವೊಂದರಲ್ಲಿ ಮದುವೆ ನಿಗದಿಯಾಗಿತ್ತು. ವಧುವಿನ ಕುಟುಂಬ ಮತ್ತು ಸಂಬಂಧಿಕರು ಎಲ್ಲರೂ ವರನಿದ್ದ ಸ್ಥಳವನ್ನು ತಲುಪಿದರು. ಸಂಪ್ರದಾಯದಂತೆ ಸಕಲ ವಿಧಿವಿಧಾನಗಳು ನೆರವೇರಿದ್ದು, ಶೀತ ವಾತಾವರಣದ ನಡುವೆ ಬಯಲಿನಲ್ಲಿ ವರಮಾಲಾ ಸಮಾರಂಭವೂ ನೆರವೇರಿತು. ನಂತರ ಸಪ್ತಪದಿ ತುಳಿಯಲು ಸಿದ್ಧರಾಗಿದ್ದರು. ಪುರೋಹಿತರು ಮಂತ್ರ ಪಠಿಸುತ್ತಿದ್ದಂತೆ ವರ ನಡುಗಲು ಶುರು ಮಾಡಿದ್ದ. ತಕ್ಷಣವೇ ಪ್ರಜ್ಞೆ ತಪ್ಪಿ ಬಿದ್ದಿದ್ದ.

ಗಾಬರಿಯಾದ ಮದುಮಗನ ಮನೆಯವರು ಆತನನ್ನು ಸಮೀಪದ ಕೋಣೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಿದರು. ವೈದ್ಯರನ್ನು ಕರೆಸಲಾಯಿತು. ಒಂದೂವರೆ ಗಂಟೆಗಳ ಬಳಿಕ ವರನಿಗೆ ಪ್ರಜ್ಞೆ ಬಂದಿತ್ತು. ಆದರೆ ವಧು ಅಷ್ಟರಲ್ಲಾಗಲೇ ಮದುವೆ ನಿರಾಕರಿಸಿದ್ದಾಳೆ. ಆರ್ನವ್ ಯಾವುದೋ ಕಾಯಿಲೆಯಿಂದ ಬಳಲುತ್ತಿದ್ದ ಕಾರಣ ಆತ ಚಳಿಯಲ್ಲಿ ಮೂರ್ಛೆ ಹೋಗಿದ್ದಾನೆ ಎಂಬ ಭಯ ಕಾಡುತ್ತಿದೆ ಎಂದು ಅಂಕಿತಾ ಹೇಳಿ ಮದುವೆ ರದ್ದುಗೊಳಿಸಿದ್ದರು. ಇದರಿಂದ ಎರಡೂ ಕುಟುಂಬಗಳ ನಡುವೆ ವಿವಾದ ಉಂಟಾಗಿತ್ತು. ವಧುವಿನ ಮನೆಯವರು ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ವಿವಾದ ಬಗೆಹರಿಸಲು ಪೊಲೀಸರಿಗೆ ಕರೆ ಮಾಡಿದ್ದಾರೆ. ಬಾಕಿ ಉಳಿದಿರುವ ವಿವಾಹದ ವಿಧಿವಿಧಾನಗಳನ್ನು ಮುಂದುವರಿಸಲು ಎರಡೂ ಕಡೆಯವರನ್ನು ಮನವೊಲಿಸಲು ಪೊಲೀಸರು ತಮ್ಮ ಕೈಲಾದಷ್ಟು ಪ್ರಯತ್ನಿಸಿದರು.

ಆದಾಗ್ಯೂ, ಮರುದಿನ ಬೆಳಿಗ್ಗೆ ತನಕ ಪರಿಸ್ಥಿತಿ ಸುಧಾರಿಸಲಿಲ್ಲ ಮತ್ತು ಅಂತಿಮವಾಗಿ ಎರಡು ಕಡೆಯವರ ಒಪ್ಪಿಗೆಯೊಂದಿಗೆ ಮದುವೆಯನ್ನು ರದ್ದುಗೊಳಿಸಲಾಯಿತು. ಆರ್ನವ್ ಅವರ ಕುಟುಂಬವು ಘೋರ್ಪಾರಾದಲ್ಲಿರುವ ತಮ್ಮ ಮನೆಗೆ ಹಿಂದಿರುಗಿದರೆ, ಅಂಕಿತಾ ಅವರ ಕುಟುಂಬ ಮತ್ತು ಸಂಬಂಧಿಕರು ಭಾಗಲ್ಪುರಕ್ಕೆ ತೆರಳಿದರು.

PM Modi 43 ವರ್ಷಗಳ ಬಳಿಕ ಕುವೈತ್ ಗೆ ಭೇಟಿ ನೀಡಲಿದ್ದಾರೆ ಪ್ರಧಾನಿ ಮೋದಿ

Immoral relationship ಅನೈತಿಕ ಸಂಬಂಧ ಬಹಿರಂಗ: ಭಯದಿಂದ ವಿವಾಹಿತರಿಬ್ಬರು ಆತ್ಮಹ*ತ್ಯೆ

Dinga Dinga Disease ಈ ಹೊಸ ವೈರಸ್‌ಗೆ ಮಹಿಳೆಯರೇ ಟಾರ್ಗೆಟ್; ಈ ರೋಗ ಎಷ್ಟು ಅಪಾಯಕಾರಿ?

TAGGED:bride has enough...Effect of cold weather on marriage: Groom sick
Share This Article
Facebook Twitter Copy Link Print
Previous Article B.S Yeddyurappa ಯಡಿಯೂರಪ್ಪ ವಿರುದ್ಧದ ಪೋಕ್ಸೋ ಕೇಸ್ ವಿಚಾರಣೆಯನ್ನು ನಾಳೆಗೆ ಮುಂದೂಡಿದ ಹೈಕೋರ್ಟ್
Next Article Crows biriyani ಹಬ್ಬದಡುಗೆ ಮಾಡಲು 19 ಕಾಗೆ ಕೊಂದ ದಂಪತಿಗೆ ಐದು ಸಾವಿರ ರೂ. ದಂಡ

Popular Posts

CJP protest effect ಕೇಂದ್ರ ಶಿಕ್ಷಣ ಇಲಾಖೆಯಲ್ಲಿ ಭಾರೀ ಬದಲಾವಣೆ: ಶಿಕ್ಷಣ ಕಾರ್ಯದರ್ಶಿ ವಿನೀತ್ ಜೋಶಿ ವರ್ಗಾವಣೆ!

1 Min Read

cockroach fighters new technology ಜಿರಳೆ ಹೋರಾಟಗಾರರು ಹೊಸ ತಂತ್ರಜ್ಞಾನ ಬಳಸಿದ್ರಾ? ಈ ಆ್ಯಪ್‌ಗೆ ಸಿಮ್ ಬೇಡ, ಇಂಟರ್‌ನೆಟ್ಟೂ ಬೇಡ! ಪೊಲೀಸರು ಕಂಗಾಲು

5 Min Read

Health ರಾತ್ರಿ ಮಲಗುವ ಮುನ್ನ ಮೊಬೈಲ್ ಸ್ಕ್ರೋಲಿಂಗ್ ಮಾಡಿದರೆ ಭಾರೀ ಅಪಾಯ!

1 Min Read

Big demolition ಅತಿ ಎತ್ತರದ, 200 ಕೋಟಿ ವೆಚ್ಚದ ಕಟ್ಟಡ ತೆರವಿಗೆ GBA ನಿರ್ಧಾರ: ಉದ್ಘಾಟನೆಗೂ ಮುನ್ನವೇ ಡೆಮಾಲಿಷನ್!

2 Min Read

You Might Also Like

ಕರ್ನಾಟಕದೇಶಪ್ರಮುಖವೈರಲ್

Surprise Gift ಆಫೀಸ್ ಫ್ಲೋರ್‌ನಲ್ಲೇ ಸ್ಕೂಟರ್ ರೈಡ್ ಮಾಡಿದ ಬಾಸ್! ಅತ್ಯುತ್ತಮ ಉದ್ಯೋಗಿಗೆ ಸರ್ಪ್ರೈಸ್ ಗಿಫ್ಟ್, ವಿಡಿಯೋ ನೋಡಿ

1 Min Read
ದೇಶಕರ್ನಾಟಕಪ್ರಮುಖ

Nandini Ghee, Butter costly ಜನರಿಗೆ ಮತ್ತೊಂದು ಶಾಕ್: ನಂದಿನಿ ಬೆಣ್ಣೆ, ತುಪ್ಪವೂ ದುಬಾರಿ, ನಾಳೆಯಿಂದಲೇ ಜಾರಿ

1 Min Read
ದೇಶಪ್ರಮುಖ

ಜಂತರ್ ಮಂತರ್ ಸುತ್ತ 1.5 ಕಿಮೀ ವ್ಯಾಪ್ತಿಯಲ್ಲಿ ಮೊಬೈಲ್ ಇಂಟರ್ನೆಟ್ ಸೇವೆ ಬಂದ್!

1 Min Read
ಕರ್ನಾಟಕದೇಶಪ್ರಮುಖ

Smart phones expensive ದುಬಾರಿಯಾಗಲಿವೆ ಮೊಬೈಲ್, ಲ್ಯಾಪ್‌ಟಾಪ್! ಮತ್ತೆ ಶೇ.10-15ರಷ್ಟು ಹೆಚ್ಚಳ ಸಾಧ್ಯತೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?