newsics.com
ಬೆಂಗಳೂರು: 14 ವರ್ಷಗಳ ಬಳಿಕ ಬೆಂಗಳೂರು ಭೀಕರ ಚಳಿಯೊಂದನ್ನು ಹೊತ್ತುಕೊಂಡು ಇಂದಿನಿಂದ ಬೆಂಗಳೂರನ್ನು ಕಾಡಲಿದೆ.
ಭಾರತೀಯ ಹವಾಮಾನ ಇಲಾಖೆಯೇ ಕೊಟ್ಟ ಎಚ್ಚರಿಕೆ 2010ರ ಬಳಿಕ ಬೆಂಗಳೂರು ಮತ್ತೊಮ್ಮೆ ವಿಪರೀತ ಚಳಿಗೆ ಗಢಗಢ ಎಂದು ನಡುಗಲಿದೆ.
ಭಾರತೀಯ ಹವಾಮಾನ ಇಲಾಖೆ ಹೇಳುವ ಪ್ರಕಾರ ಮಂಗಳವಾರ ಅಂದ್ರೆ ಇಂದು ರಾತ್ರಿ ಬೆಂಗಳೂರಿನ ತಾಪಮಾನ ಸುಮಾರು 12.4 ಡಿಗ್ರಿ ಸೆಲ್ಸಿಯಸ್ಗೆ ಇಳಿಯಲಿದೆಯಂತೆ. ಇದು 14 ವರ್ಷಗಳ ಬಳಿಕ ದಾಖಲೆಯ ಮಟ್ಟದಲ್ಲಿ ತಾಪಮಾನದ ಇಳಿಕೆ ಎಂದು ಐಎಂಡಿ ಹೇಳಿದೆ. ಈ ಹಿಂದೆ 2010ರಲ್ಲಿ 12.8 ಡಿಗ್ರಿ ಸೆಲ್ಸಿಯಸ್ ತಾಪಮಾನ ಬೆಂಗಳೂರಿನಲ್ಲಿ ದಾಖಲಾಗಿತ್ತು. ಅದಾದ ಬಳಿಕ ಈ ಹಿಂದೆ ಎಂದೂ ಕೂಡ ಇಂತಹ ಚಳಿಯನ್ನು ಬೆಂಗಳೂರು ಅನುಭವಿಸಿರಲಿಲ್ಲ. ಇಂದು ರಾತ್ರಿ ಅಂತಹುದೇ ಚಳಿಗೆ ಬೆಂಗಳೂರಿಗರು ಪತರುಗುಟ್ಟಿ ಹೋಗುವವರಿದ್ದು. ಆದಷ್ಟು ಬೆಚ್ಚಗೆ ಇರುವುದು ಒಳ್ಳೆಯದು.
ಡಿಸೆಂಬರ್‌ನಲ್ಲಿ ಬೆಂಗಳೂರು ಸಾಮಾನ್ಯವಾಗಿ 15.7 ಡಿಗ್ರಿಸೆಲ್ಸಿಯಸ್ ತಾಪಮಾನವನ್ನು ಅನುಭವಿಸುತ್ತದೆ ಆದ್ರೆ ಈ ಬಾರಿ ತಾಪಮಾನದಲ್ಲಿ ಮೂರು ಡಿಗ್ರಿಸೆಲ್ಸಿಯಸ್ನಷ್ಟು ಕುಸಿದಿದ್ದು ಇತ್ತೀಚೆಗೆ ಈ ಹಿಂದೆ ಎಂದೂ ಕಾಣದ ಚಳಿಯನ್ನು ಬೆಂಗಳೂರಿಗರು ಇಂದು ರಾತ್ರಿ ಅನುಭವಿಸಲಿದ್ದಾರೆ.
ಈ ಬಾರಿ ರಾಜ್ಯದಲ್ಲಾದ ವಿಪರೀತ ಮಳೆ ಹಾಗೂ ಬಂಗಾಳ ಕೊಲ್ಲಿಯಲ್ಲಾದ ವಾಯುಭಾರ ಕುಸಿತದಿಂದಾಗಿ ಸಿಲಿಕಾನ್ ಸಿಟಿಗೆ ಇಂತಹದೊಂದು ಭೀಕರ ಚಳಿಗಾಲವನ್ನು ಎದುರಿಸುವ ಪರಿಸ್ಥಿತಿ ಬಂದಿದೆ ಎಂದು ಹವಾಮಾನ ಇಲಾಖೆ ಹೇಳಿದೆ.