newsics.com
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಂಗಳವಾರ (ಡಿ. 17) ಮೈ ನಡುಗಿಸುವ ಭಯಂಕರ ಚಳಿಯ ಅನುಭವವಾಗಲಿದೆ.
ಕಳೆದೊಂದು ದಶಮಾನದಲ್ಲೇ ಕಂಡರಿಯದಷ್ಟು ಚಳಿ ಆವರಿಸಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಇಂಥ ಭಯಾನಕ ಚಳಿ 2010-11ರಿಂದೀಚೆಗೆ ನೋಡಲು ಸಾಧ್ಯವೇ ಇಲ್ಲ ಎಂದೂ ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಷ್ಟರಮಟ್ಟಿಗೆ ಇಂದು ರಾತ್ರಿ ಮೈನಡುಗಿಸುಂಥ ಚಳಿ ಆವರಿಸಲಿದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.
ಇಂದು ರಾತ್ರಿ ತಾಪಮಾನ 12.4 ಡಿಗ್ರಿ ಸೆಲ್ಸಿಯಸ್‌ವರೆಗೆ ಇಳಿಯಲಿದೆ. ನಿಜಕ್ಕೂ ಈ ಮಟ್ಟಕ್ಕೆ ತಾಪಮಾನ ಇಳಿದರೆ ಕಳೆದ 14 ವರ್ಷಗಳಲ್ಲೇ ಅತಿ ಕಡಿಮೆ ತಾಪಮಾನ ಇದಾಗಲಿದೆ ಎಂದು ಹೇಳಿದೆ.
2011ರ ಡಿ. 24ರ ರಾತ್ರಿ ಇದೇ ರೀತಿ ತಾಪಮಾನ ತೀರಾ ಕೆಳಮಟ್ಟಕ್ಕೆ ಇಳಿದಿತ್ತು. ಅಂದು, 12.8 ಡಿಗ್ರಿ ಸೆಲ್ಸಿಯಸ್ ಗೆ ತಾಪಮಾನ ಇಳಿಕೆಯಾಗಿತ್ತು. 14 ವರ್ಷಗಳ ಬಳಿಕ ಮತ್ತೆ ಅಂಥದ್ದೇ ಪರಿಸ್ಥಿತಿ ಬೆಂಗಳೂರಲ್ಲಿ ಸೃಷ್ಟಿಯಾಗಲಿದೆ ಎಂದು ತಜ್ಞರು ತಿಳಿಸಿದ್ದಾರೆ
ಸಾಮಾನ್ಯವಾಗಿ ಡಿಸೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಚಳಿ ಇದ್ದೇ ಇರುತ್ತದೆ. ರಾತ್ರಿ ವೇಳೆ ಸರಾಸರಿ ಉಷ್ಣಾಂಶ 15.7 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಆದರೆ, ಈ ವರ್ಷ ಚಳಿ ಸ್ವಲ್ಪ ಜಾಸ್ತಿಯೇ ಇದೆ. ಭಾನುವಾರದಂದು (ಡಿ. 15) ರಾತ್ರಿ ತಾಪಮಾನ 15.5 ಡಿಗ್ರಿ ಸೆಲ್ಸಿಯಸ್ ನಷ್ಟಿತ್ತು. ಎಚ್ ಎಎಲ್ ನಲ್ಲಿ ಉಷ್ಣಾಂಶ ಮತ್ತಷ್ಟು ಕುಸಿದಿತ್ತು. ಅಲ್ಲಿ ಉಷ್ಣಾಂಶವು 14.7 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿತ್ತು. ಬೆಂಗಳೂರು ಇಂಟರ್ ನ್ಯಾ,ಷನಲ್ ಏರ್ ಪೋರ್ಟ್ ಬಳಿ 14.5 ಡಿಗ್ರಿ ಸೆಲ್ಸಿಯಸ್ ಗೆ ಇಳಿದಿತ್ತು.
ಆದರೆ ಇಂದು ರಾತ್ರಿ ಅತೀವ ಚಳಿಯಿರುವುದು ಮಾತ್ರವಲ್ಲ, ಈ ಬಾರಿ ಡಿಸೆಂಬರ್ ತಿಂಗಳು ಪೂರ್ತಿಯಾಗಿ ಪ್ರತಿ ರಾತ್ರಿಯೂ ಚಳಿಯಿರಲಿದೆ ಎಂದು ಐಎಂಡಿ ತಜ್ಞರು ತಿಳಿಸಿದ್ದಾರೆ.
ಈ ಅತಿ ಚಳಿ ಪರಿಸ್ಥಿತಿಗೆ ಬಂಗಾಳಕೊಲ್ಲಿಯಲ್ಲಿ ಹಾಗೂ ಅರಬ್ಬೀ ಸಮುದ್ರದಲ್ಲಿ ಉಂಟಾದ ಚಂಡಮಾರುತಗಳೇ ಕಾರಣ ಎಂದು ಹವಾಮಾನ ತಜ್ಞರು ವಿಶ್ಲೇಷಿಸಿದ್ದಾರೆ.
Tirupati Thimmappa ಒಂದೇ ಗಂಟೆಯಲ್ಲಿ ತಿರುಪತಿ ತಿಮ್ಮಪ್ಪನ ದರ್ಶನ! ಶೀಘ್ರದಲ್ಲೇ ಹೊಸ ವ್ಯವಸ್ಥೆ ಜಾರಿ
Ustad Zakir Memory ಡಮರುಗವಾದ ತಬಲಾ… ಉಸ್ತಾದ್ ಝಾಕಿರ್ ಕೈಬೆರಳುಗಳ ಚಮತ್ಕಾರ ನೋಡಿ, ಅವರ ಅದ್ಭುತ ಮಾತನ್ನೂ ಕೇಳಿ!