newsics.com
ಬೆಂಗಳೂರು: ಪತ್ನಿಯ ಕಿರುಕುಳ ತಾಳಲಾರದೆ ಇತ್ತೀಚೆಗೆ ಬೆಂಗಳೂರಿನಲ್ಲಿ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಂಡಿದ್ದರು.
ಇದೀಗ ಮೃತ ಅತುಲ್ ಸುಭಾಷ್ ಪತ್ನಿ ಸೇರಿದಂತೆ ಮೂವರು ಆರೋಪಿಗಳನ್ನು ಉತ್ತರಪ್ರದೇಶದ ಅಲಹಾಬಾದ್‌ನಲ್ಲಿ ಬೆಂಗಳೂರಿನ ಮಾರತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಅತುಲ್ ಸುಭಾಷ್ ಪತ್ನಿ ನಿಖಿತಾ ಸಿಂಘಾನಿಯ, ನೀಶಾ, ಹಾಗೂ ಅನುರಾಗ್ ಸಿಂಘಾನಿಯ ಬಂಧಿತ ಆರೋಪಿಗಳು. ಬಂಧಿತ ಮೂವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನ ನ್ಯಾಯಾಂಗ ವಶಕ್ಕೆ ನೀಡಿ ಕೋರ್ಟ್ ಆದೇಶಿಸಿದೆ.
ಪತ್ನಿಯ ಕಿರುಕುಳಕ್ಕೆ ಬೇಸತ್ತು ಟಕ್ಕಿ ಅತುಲ್ ಸುಭಾಷ್ ಸುಮಾರು 24 ಪುಟಗಳಷ್ಟು ಕಿರುಕುಳದ ಬಗ್ಗೆ ಡೆತ್ ನೋಟ್‌ನಲ್ಲಿ ಉಲ್ಲೆಖಿಸಿದ್ದರು. ಪತ್ನಿ ತಮಗೆ ನೀಡುತ್ತಿರುವ ಕಿರುಕುಳದ ಬಗ್ಗೆ ಉಲ್ಲೇಖಿಸಿ ಆತ್ಮಹತ್ಯೆಗೆ ಶರಣಾಗಿದ್ದರು.
ಕಳೆದ ಸೋಮವಾರ ಬೆಂಗಳೂರಿನಲ್ಲಿ ಅತುಲ್ ಸುಭಾಷ್ ಎಂಬ ಯುಪಿ ಮೂಲದ ಟೆಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದರು. 24 ಪುಟಗಳ ಡೆತ್ ನೋಟ್ ಅಲ್ಲದೆ 90 ನಿಮಿಷದ ವಿಡಿಯೋವನ್ನು ಮಾಡಿದ್ದಾರೆ.
ಈ ಹಿನ್ನೆಲೆ ಜೌನ್‌ಪುರದಲ್ಲಿರುವ ಅತುಲ್ ಸುಭಾಷ್ ಅವರ ಪತ್ನಿಯ ನಿವಾಸದ ಹೊರಗೆ ಪೊಲೀಸರು ನೊಟೀಸ್ ಅಂಟಿಸಿ ಬಂದಿದ್ದರು. ಅದರಲ್ಲಿ ‘ನಿಮ್ಮನ್ನು ವಿಚಾರಣೆ ಮಾಡಲು ಸಮಂಜಸವಾದ ಆಧಾರಗಳಿವೆ. ಮೂರು ದಿನಗಳೊಳಗೆ ಬೆಂಗಳೂರಿನ ತನಿಖಾಧಿಕಾರಿಯ ಮುಂದೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು.
Maggie price hike ಜನವರಿಯಿಂದ ಮ್ಯಾಗಿ ದುಬಾರಿ ಸಾಧ್ಯತೆ, ಯಾಕೆ ದರ ಹೆಚ್ಚಳ?
International Tea Day ಚಹಾ ಕುಡಿದ್ರೆ ತೂಕ ಜಾಸ್ತಿಯಾಗತ್ತಾ? ಕಡಿಮೆಯಾಗತ್ತಾ? ನೀವು ಕುಡಿಯುವ ಟೀ ಹೇಗಿರಬೇಕು?
Relationship ಸುಮಧುರ ಸಂಸಾರಕ್ಕೇನು ಬೇಕು? ಆಚಾರ್ಯ ಚಾಣಕ್ಯ ಹೇಳಿರೋದೇನು?