Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಹುಟ್ಟೂರು ಸೋಮನಹಳ್ಳಿಯಲ್ಲಿ ಅಂತ್ಯಕ್ರಿಯೆ: ಪಂಚಭೂತಗಳಲ್ಲಿ ಎಸ್.ಎಂ. ಕೃಷ್ಣ ಲೀನ
ಕರ್ನಾಟಕದೇಶಪ್ರಮುಖ

ಹುಟ್ಟೂರು ಸೋಮನಹಳ್ಳಿಯಲ್ಲಿ ಅಂತ್ಯಕ್ರಿಯೆ: ಪಂಚಭೂತಗಳಲ್ಲಿ ಎಸ್.ಎಂ. ಕೃಷ್ಣ ಲೀನ

Share
1 Min Read
SHARE

newsics.com

ಬೆಂಗಳೂರು: ಸೋಮವಾರ ತಡರಾತ್ರಿ ಬೆಂಗಳೂರಿನ ಸದಾಶಿವನಗರದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಅಂತ್ಯಕ್ರಿಯೆ ಬುಧವಾರ ಸಂಜೆ ಹುಟ್ಟೂರು ಸೋಮನಹಳ್ಳಿಯಲ್ಲಿ ನೆರವೇರಿತು.

ಈ‌ ಮೂಲಕ ಐಟಿ ಹಬ್ ದೊರೆ, ಕನಸುಗಾರ ರಾಜಕಾರಣಿ, ಧೀಮಂತ ವ್ಯಕ್ತಿತ್ವದ ಕೃಷ್ಣ ಪಂಚಭೂತಗಳಲ್ಲಿ‌ ಲೀನರಾದರು.

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗಿದೆ.

ಬುಧವಾರ ಮಧ್ಯಾಹ್ನ ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಗೆ ತರಲಾಗಿತ್ತು.

ಈ ವೇಳೆ ಸೋಮನಹಳ್ಳಿ ಗ್ರಾಮಸ್ಥರು ಅಂತಿಮ ದರ್ಶನ ಪಡೆದರು. ಬಳಿಕ ಎಸ್.ಎಂ ಕೃಷ್ಣ ಪಾರ್ಥಿವ ಶರೀರದ ಅಂತಿಮ ವಿಧಿ ವಿಧಾನ ಕಾರ್ಯದ ಬಳಿಕ ಹಿಂದೂ ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

ರಾಷ್ಟ್ರಗೀತೆ ನುಡಿಸಿ 3 ಬಾರಿ ಕುಶಾಲತೋಪು ಹಾರಿಸಿ ಎಸ್.ಎಂ.ಕೃಷ್ಣ ಅವರಿಗೆ ಸರ್ಕಾರಿ ಗೌರವ ಸಮರ್ಪಣೆ ಮಾಡಲಾಯಿತು. ವಿವಿಧ ಮಠದ ಸ್ವಾಮೀಜಿಗಳು ಅಂತಿಮ ದರ್ಶನ ಪಡೆದಿದ್ದು, ಅಂತ್ಯಕ್ರಿಯೆ 15 ಸ್ವಾಮೀಜಿಗಳು ವೇದ-ಮಂತ್ರಗಳ ಪಠಣ ಮಾಡಿದರು. ಸನಾತನ ಹಿಂದೂ ಧರ್ಮದ ವಿಧಿ ವಿಧಾನ ಮುಗಿದ ಬಳಿಕ ಒಕ್ಕಲಿಗ ಸಂಪ್ರದಾಯದಂತೆ ತಾತನ ಚಿತೆಗೆ ಪ್ರೀತಿಯ ಮೊಮ್ಮಗ ಅಮರ್ತ್ಯ ಅಗ್ನಿ ಸ್ಪರ್ಶ ಮಾಡಿದರು.

ಅಂತ್ಯಕ್ರಿಯೆಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಆರ್. ಅಶೋಕ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಹಲವು ರಾಜಕೀಯ ನಾಯಕರು ಭಾಗಿಯಾಗಿದರು.

ಕರ್ನಾಟಕದ ಹಿರಿಯ ರಾಜಕಾರಣಿಗಳಲ್ಲೊಬ್ಬರಾಗಿದ್ದ ಎಸ್ಸೆಂ‌ ಕೃಷ್ಣ 1999 ರಿಂದ 2004 ರವರೆಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ಮಹಾರಾಷ್ಟ್ರ ರಾಜ್ಯದ ಮಾಜಿ ರಾಜ್ಯಪಾಲರಾದ ಇವರು, ಕೇಂದ್ರ ವಿದೇಶಾಂಗ ಸಚಿವರಾಗಿಯೂ ಸಹ ಕಾರ್ಯ ನಿರ್ವಹಿಸಿದ್ದಾರೆ.

ವಿದ್ಯಾಭ್ಯಾಸದ ದೃಷ್ಟಿಯಿಂದ, ಕರ್ನಾಟಕದ ಅತ್ಯಂತ ಹೆಚ್ಚು ಸುಶಿಕ್ಷಿತ ಮುಖ್ಯಮಂತ್ರಿಗಳಲ್ಲಿ ಕೃಷ್ಣ ಒಬ್ಬರು. ಇವರು ಬಹುಕಾಲ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದರು, ಬದಲಾದ ರಾಜಕೀಯ ಸನ್ನಿವೇಶಗಳ ಕಾರಣ ಮಾರ್ಚ್ 2017 ರಂದು ಭಾರತೀಯ ಜನತಾ ಪಕ್ಷದ ಸದಸ್ಯತ್ವ ಪದೆದರು.

TAGGED:Funeral at native place Somanahalli: Krishna Leena in the Panchabhutas
Share This Article
Facebook Twitter Copy Link Print
Previous Article Srileela ಹೂದೋಟಕ್ಕೆ  ನಟಿ ಶ್ರೀಲೀಲಾ ಫೋಟೋ ಹಾಕಿದ ರೈತ
Next Article SM Krishna ಪಂಚಭೂತಗಳಲ್ಲಿ ಲೀನರಾದ SM ಕೃಷ್ಣ : ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

Popular Posts

Strange fever ರಾಜ್ಯದಲ್ಲಿ ವಿಚಿತ್ರ ಜ್ವರ: ಕಂಗಾಲಾದ ಜನ, ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ

1 Min Read

KSRTC ಬಸ್‌ನಲ್ಲಿ ಸೀಟಿಗಾಗಿ ಜಗಳ: ಮಹಿಳೆ ಮೇಲೆ ಕಂಡಕ್ಟರ್ ಹಲ್ಲೆ, ವಿಡಿಯೋ ನೋಡಿ

2 Min Read

Mouni Roy ಮೌನಿ ರಾಯ್ ಜೊತೆಗಿನ ಅಫೇರ್ ಗಾಸಿಪ್‌ಗೆ ಅರ್ಜುನ್ ಬಿಜ್ಲಾನಿ ಬ್ರೇಕ್

2 Min Read

Jennifer Winget ಎರಡನೇ ಮದುವೆಯಾದ ಸ್ಟಾರ್ ನಟಿ ಜೆನ್ನಿಫರ್ ವಿಂಗೆಟ್

1 Min Read

You Might Also Like

ಪ್ರಮುಖಮನರಂಜನೆ

Toxic Movie ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಟ್ರೈಲರ್ ರಿಲೀಸ್ ಡೇಟ್ ಫಿಕ್ಸ್

1 Min Read
ಪ್ರಮುಖಕರ್ನಾಟಕಮನರಂಜನೆ

Kwatle Kichen ಗಿಲ್ಲಿ ನಟನ ಜೊತೆ ಫೋಟೋ ಶೇರ್ ಮಾಡಿ ‘ಜೀವ ಒಂದೇ’ ಎಂದ ರಕ್ಷಿತಾ ಶೆಟ್ಟಿ

1 Min Read
ಪಂಚಾಂಗಜ್ಯೋತಿಷ್ಯಪ್ರಮುಖ

Astrology ನಾಳೆ ಶಿವಯೋಗ, ಸಿದ್ಧಿಯೋಗ: ಈ ಐದು ರಾಶಿಗಳ ಜನರಿಗೆ‌ ಬಂಪರ್ ಅದೃಷ್ಟ

4 Min Read
ಪ್ರಮುಖದೇಶವಿದೇಶ

FIFA World Cup 2026 ಫಿಫಾ ವಿಶ್ವಕಪ್ ಫೈನಲ್; ಜುಲೈ 20 ರಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ ಸರ್ಕಾರ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?