newsics.com
ಬೆಂಗಳೂರು: ಪಿಡಿಒ ಪರೀಕ್ಷಾರ್ಥಿಗಳಿಗಾಗಿ ಭಾನುವಾರ ನಮ್ಮ ಮೆಟ್ರೋ ಸಂಚಾರ ಸಮಯದಲ್ಲಿ ಬದಲಾವಣೆ ಮಾಡಿದೆ.
ಡಿಸೆಂಬರ್ 8 ರಂದು ಕರ್ನಾಟಕ ಲೋಕಸೇವಾ ಆಯೋಗದ ಪಿಡಿಓ ಪರೀಕ್ಷೆ ನಡೆಯಲಿದೆ. ಹೀಗಾಗಿ ಭಾನುವಾರ ಬೆಳಗ್ಗೆ 7 ಗಂಟೆ ಬದಲಾಗಿ, ಬೆಳಗ್ಗೆ 5:30 ರಿಂದ ಮೆಟ್ರೋ ರೈಲುಗಳ ಸಂಚಾರ ಆರಂಭಗೊಳ್ಳಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ತಿಳಿಸಿದೆ.
ಪ್ರತಿ ಭಾನುವಾರ ಬೆಳಗ್ಗೆ 7 ಗಂಟೆಯಿಂದ ಮೆಟ್ರೋ ರೈಲುಗಳು ಸಂಚಾರ ಆರಂಭವಾಗುತ್ತದೆ. ಆದರೆ ಪಿಡಿಓ ಪರೀಕ್ಷೆ ಹಿನ್ನೆಲೆಯಲ್ಲಿ ಈ ಭಾನುವಾರ ಬೆಳಗ್ಗೆ 5:30 ರಿಂದ ಮೆಟ್ರೋ ರೈಲುಗಳ ಸಂಚಾರ ಮಾಡುವುದಾಗಿ ಬಿಎಂಆರ್‌ಸಿಎಲ್ ಮಾಧ್ಯಮ ಪ್ರಕಟಣೆ ತಿಳಿಸಿದೆ.
ಅಭ್ಯರ್ಥಿಗಳು ಸಮಯಕ್ಕೆ ಸರಿಯಾಗಿ ಪರೀಕ್ಷೆಗೆ ಹಾಜರಾಗಲು ಬಿಎಂಆರ್ಸಿಎಲ್ ಮೆಟ್ರೋ ರೈಲು ಸೇವೆಯನ್ನು ಬೆಳಗ್ಗೆ 07:00 ಗಂಟೆಗೆ ಬದಲಾಗಿ 05:30 ಗಂಟೆಗೆ ಎಲ್ಲಾ ನಾಲ್ಕು ಟರ್ಮಿನಲ್ ನಿಲ್ದಾಣಗಳಾದ ಮಾದಾವರ, ರೇಷ್ಮೆ ಸಂಸ್ಥೆ, ಚಲ್ಲಘಟ್ಟ ಮತ್ತು ವೈಟ್ ಫೀಲ್ಡ್(ಕಾಡುಗೋಡಿ) ಮೆಟ್ರೋ ನಿಲ್ದಾಣಗಳಿಂದ ಪ್ರಾರಂಭಿಸಲಿದೆ. ಅಲ್ಲದೆ, ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್‌ನಿಂದ ಎಲ್ಲಾ ನಾಲ್ಕು ದಿಕ್ಕಿಗೆ ಮೊದಲ ರೈಲು ಬೆಳಗ್ಗೆ 5:30 ಗಂಟೆಗೆ ಹೊರಡಲಿದೆ ಎಂದು ಬಿಎಂಆರ್ ಸಿಎಲ್ ತಿಳಿಸಿದೆ.
ಈ ಅವಧಿಯಲ್ಲಿ ಅಂದರ ಬೆಳಗ್ಗೆ 5.30 ರಿಂದ 7 ಗಂಟೆಯವರೆಗೆ ರೈಲುಗಳು 30 ನಿಮಿಷಗಳ ಅಂತರದಲ್ಲಿ ಚಲಿಸುತ್ತವೆ. ಬೆಳಗ್ಗೆ 7 ಗಂಟೆಯ ನಂತರ ಎಂದಿನಂತೆ ರೈಲುಗಳು ಚಲಿಸುತ್ತವೆ. ಸಾವಾಜನಿಕರು ಹಾಗೂ ಪರೀಕ್ಷೆಗೆ ಹೋಗುವ ಅಭ್ಯರ್ಥಿಗಳ ಈ ಸೌಲಭ್ಯವನ್ನು ಉಪಯೋಗಿಸಿಕೊಳ್ಳಬೇಕೆಂದು ಕೋರಲಾಗಿದೆ.
KMF MD Transfer ಕೆಎಂಎಫ್ ಎಂಡಿ ಜಗದೀಶ್ ದಿಢೀರ್ ವರ್ಗಾವಣೆ: ಸರ್ಕಾರದ ಕ್ರಮಕ್ಕೆ ವ್ಯಾಪಕ ಆಕ್ರೋಶ,ಕೇರಳ ಲಾಬಿ ಶಂಕೆ
Cyber Crime ಮಾಜಿ ಮಿಸ್ ಇಂಡಿಯಾ ಸುಂದರಿ ಡಿಜಿಟಲ್ ಅರೆಸ್ಟ್: 99 ಸಾವಿರ ರೂ. ಕಳೆದುಕೊಂಡ ಶಿವಂಕಿತಾ ದೀಕ್ಷಿತ್