newsics.com
ನವದೆಹಲಿ : ಮೂವರು ಯುವತಿಯರು ನಾವು ಕೂಡಾ ಯಾರಿಗೂ ಕಮ್ಮಿಯಿಲ್ಲ ಎನ್ನುವಂತೆ ಬರೀ ಬಾತ್ ಟವೆಲ್ ಸುತ್ತಿ ಮೆಟ್ರೋದಲ್ಲಿ ಓಡಾಡಿದ್ದಾರೆ. ಇವರ ಈ ಅವತಾರವನ್ನು ಕಂಡು ಅಲ್ಲಿದ್ದ ಜನ ಬೆರಗಾಗಿದ್ದು, ಈ ಕುರಿತ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಕಣ್ಣಿಗೊಂದು ಗ್ಲಾಸ್, ತಲೆಗೊಂದು ಟವೆಲ್, ಮೈಗೊಂದು ಬಾತ್ ಟವೆಲ್, ಹೈ ಹೀಲ್ಸ್ ಧರಿಸಿ ಫ್ಯಾಷನ್ ಮಾಡೆಲ್‌ಗಳಂತೆ ಎಂಟ್ರಿ ಕೊಟ್ಟ ಮೂವರು ಯುವತಿಯರು ಸಖತ್ ಪೋಸ್ ಕೊಡುತ್ತಾ ಮೆಟ್ರೋದಲ್ಲಿ ಅಡ್ಡಾಡಿದ್ದಾರೆ. ಇವರ ಈ ಅವತಾರವನ್ನು ಕಂಡು ಹಲವರು ದಂಗಾದರೆ, ಇನ್ನೂ ಕೆಲವರು ಇವರುಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
https://www.instagram.com/reel/DC4XfYBRXZ5/?igsh=ZjAwbnZ6ejd0YmZo
ಈ ಕುರಿತ ವಿಡಿಯೋವೊಂದನ್ನು mimisskate ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕಣ್ಣಿಗೊಂದು ಕಪ್ಪು ಗ್ಲಾಸ್, ತಲೆಗೊಂದು ಟವೆಲ್, ಹೈ ಹೀಲ್ಸ್ ಧರಿಸಿ, ಮೈಗೆ ಬಾತ್ ಟವೆಲ್ ಸುತ್ತಿ ಮೂವರು ಬೆಡಗಿಯರು ಮೆಟ್ರೋದಲ್ಲಿ ಅಡ್ಡಾಡುವಂತಹ ದೃಶ್ಯವನ್ನು ಕಾಣಬಹುದು.