newsics.com
ಬೆಂಗಳೂರು: ಸ್ನಾನಕ್ಕೆ ಹೋಗಿದ್ದ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಅಡೇಪೇಟೆಯಲ್ಲಿ ನಡೆದಿದೆ.
ಲಕ್ಷ್ಮೀ (25) ಮೃತ ಮಹಿಳೆ. ಸಂಬಂಧಿಕರೊಬ್ಬರ ಮನೆಗೆ ಹೋಗಿದ್ದ ವೇಳೆ ಸ್ನಾನಕ್ಕೆಂದು ಹೋಗಿದ್ದ ಲಕ್ಷ್ಮೀ ನಿಗೂಢವಾಗಿ ಮೃತಪಟ್ಟಿದ್ದಾರೆ.
ಆಂಧ್ರಪ್ರದೇಶದ ತಿರುಪತಿ ಮೂಲದ ಲಕ್ಷ್ಮೀ ತನ್ನ ಪತಿಯೊಂದಿಗೆ ಮಲ್ಲೇಶ್ವರಂನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದರು. ಅಡೇಪೇಟೆಯಲ್ಲಿರುವ ಸಂಬಂಧಿ ಸುಹಾಸಿನಿ ಎಂಬುವರ ಮನೆಗೆ ಪತಿ ಜತೆ ಹೋಗಿದ್ದ ವೇಳೆ ಈ ಘಟನೆ ನಡೆದಿದ್ದು, ಸ್ನಾನಗೃಹದಲ್ಲೇ ಲಕ್ಷ್ಮಿ ಅವರ ಬೆತ್ತಲೆ ಶವ ಪತ್ತೆಯಾಗಿದೆ.
ಎಲ್ಲರೂ ಮನೆಯಲ್ಲಿಯೇ ಇದ್ದರು. ಸ್ನಾನಕ್ಕೆ ಹೋಗುವ ಮುನ್ನ ಲಕ್ಷ್ಮೀ ಮುಖದ ಮೇಲೆ ಏನೂ ಆಗಿರಲಿಲ್ಲ. ಯಾವುದೇ ಗಾಯದ ಗುರುತುಗಳೂ ಇರಲಿಲ್ಲ. ಆದರೆ ಶವದ ಮುಖದಲ್ಲಿ ಪರಚಿರುವ ಗಾಯಗಳಾಗಿವೆ. ಮನೆಗೆ ಬೇರೆ ಯಾರೂ ಬಂದಿರಲಿಲ್ಲ. ಗ್ಯಾಸ್ ಗೀಸರ್ ಕೂಡ ಆನ್ ಇರಲಿಲ್ಲ. ಬಕೆಟ್ನಲ್ಲಿ ನೀರೂ ತುಂಬಿರಲಿಲ್ಲ. ಆದರೂ ಮಹಿಳೆ ಸ್ನಾನದ ಮನೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದು, ಅನುಮಾನಕ್ಕೆ ಕಾರಣವಾಗಿದೆ.
ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Space Travel | ಬೆವರು, ಮೂತ್ರದಿಂದ ಸಂಸ್ಕರಿಸಿದ ನೀರಲ್ಲಿ ತಯಾರಿಸಿದ ಸೂಪ್ ಸೇವಿಸುತ್ತಿರುವ ಸುನೀತಾ ವಿಲಿಯಮ್ಸ್!
Health Tips | ಧೂಮಪಾನದಿಂದ ಕಣ್ಣಿಗೂ ಹಾನಿ: ಸ್ಮೋಕ್ ಝೋನ್ನಿಂದ ದೂರವಿರಿ, ಇಲ್ಲದಿದ್ದರೆ ನಿಮಗೂ ಅಪಾಯ
Big Boss Kannada 11 | ಅಚ್ಚರಿಯ ಎಲಿಮಿನೇಷನ್, ಬಿಗ್ ಬಾಸ್ ಮನೆಯಿಂದ ಹೊರಬಂದ ನಟ ಧರ್ಮ ಕೀರ್ತಿರಾಜ್