newsics.com
ದಾವಣಗೆರೆ: ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಟಗರು. ಆದ್ರೆ, ಅದೇ ಟಗರಿನ ಅಗಲಿಕೆಯಿಂದ ಇದೀಗ ಇಡೀ ಗ್ರಾಮದಲ್ಲಿ ಮೌನ ಆವರಿಸಿದೆ.
ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದ ರಘು ಎಂಬುವವರಿಗೆ ಸೇರಿದ ಕಾಳಿ ಟಗರು ಅನಾರೋಗ್ಯದಿಂದ ಬಳಲಿ ಸಾವನ್ನಪ್ಪಿದೆ.
ಈ ಕಾಳಿ ಟಗರು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿತ್ತು. 8 ವರ್ಷಗಳಿಂದ ಸೋಲಿಲ್ಲದ ಸರದಾರನಾಗಿ ಟಗರು ಮೆರೆದಿತ್ತು. ಹೋದ ಕಡೆ ಸೋಲನ್ನೇ ಕಾಣದ ಟಗರು, ಎರಡು ಬುಲೆಟ್ ಸೇರಿದಂತೆ 6 ಬೈಕ್ ಗೆದ್ದಿತ್ತು. ಈ ಟಗರಿನ ಮಾಲೀಕ ರಘು ಮನೆ ಮಗನಂತಿದ್ದ ಟಗರಿಗೆ ಅಂತ್ಯಸಂಸ್ಕಾರ ಮಾಡಿದ್ದಾರೆ.