newsics.com
ಬೆಂಗಳೂರು : ಬಿಗ್ಬಾಸ್ ಒಟಿಟಿ ಸೀಸನ್ 1ರ ಮಾಜಿ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ಹೊಸ ಮನೆಗೆ ಪ್ರವೇಶ ಬೆಳೆಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಹೊಸ ಹೊಸ ರೀಲ್ಸ್ಗಳ ಮೂಲಕ ಸಖತ್ ಸದ್ದು ಮಾಡುತ್ತಿದ್ದ ಸೋನು ಶ್ರೀನಿವಾಸ್ ಗೌಡ ಬಹಳ ಅದ್ಧೂರಿಯಾಗಿ ಗೃಹ ಪ್ರವೇಶ ಮಾಡಿದ್ದಾರೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆಎಂ ದೊಡ್ಡಯಲ್ಲಿ ತಮ್ಮ ಹೊಸ ಮನೆ ಕಟ್ಟಿಸಿದ್ದಾರೆ.
ಹೊಸ ಮನೆಗೆ ಪ್ರವೇಶ ಮಾಡಿದ ಫೋಟೋಗಳನ್ನು ಹಾಗೂ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೇ ಫೋಟೋಸ್ ನೋಡಿದ ನೆಟ್ಟಿಗರು ಕಾಮೆಂಟ್ಸ್ ಮೂಲಕ ಸೋನು ಶ್ರೀನಿವಾಸ್ ಗೌಡ ಅವರಿಗೆ ಅಭಿನಂದನೆ ತಿಳಿಸುತ್ತಿದ್ದಾರೆ.
