newsics.com
ಬೆಂಗಳೂರು: ಜಗದೀಶ್ ಮತ್ತೆ ಬಿಗ್ ಬಾಸ್ ಗೆ ಬರುತ್ತಾರೆ ಎನ್ನುವ ಚರ್ಚೆಯ ನಡುವೆಯೇ ಜಗದೀಶ್ ಜೀ ಕನ್ನಡದ ಜನಪ್ರಿಯ ಡ್ಯಾನ್ಸ್ ಶೋ, ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ನ ವೇದಿಕೆಯಲ್ಲಿ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ.
ಬಿಗ್ ಬಾಸ್ ಕನ್ನಡ (Bigg Boss Kannada-11)ದಲ್ಲಿ ಜನಮನ ಗೆದ್ದ ಲಾಯರ್ ಜಗದೀಶ್ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ.
ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಎರಡು ವಾರವಿದ್ದು ದೊಡ್ಮನೆಯಲ್ಲಿ ಮಹಿಳಾ ಸ್ಪರ್ಧಿಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಆರೋಪದ ಮೇಲೆ ಆಚೆ ಬಂದ ಜಗದೀಶ್ ಮತ್ತೆ ಬಿಗ್ ಬಾಸ್ ಮನೆಗೆ ಬರಬೇಕೆನ್ನುವ ಕೂಗು ಅನೇಕ ವೀಕ್ಷಕರಲ್ಲಿ ಇಂದಿಗೂ ಇದೆ.
ಡ್ಯಾನ್ಸ್ ಚೆನ್ನಾಗಿ ಮಾಡಿದ್ರಿ ಎಂದು ಶಿವಣ್ಣ ಜಗದೀಶ್ ಅವರಿಗೆ ಹೇಳಿದ್ದು, ರಕ್ಷಿತಾ ಅವರು ವೆಲ್ ಕಂ ಜಗದೀಶ್ ಎಂದಿದ್ದಾರೆ. ನಮ್ಮಂತಹವರು ಅವರ ಮುಂದೆ ನಿಂತಿರುವುದು ಅದೃಷ್ಟ. ರಕ್ಷಿತಾ ನಿಮ್ಮನ್ನು ನೋಡಿ ನಾನು ಶಾರುಖ್ ಖಾನ್ ಆಗಿದ್ದೇನೆ ಎಂದ ಜಗದೀಶ್, ಅನಿಸುತಿದೆ ಹಾಡಿಗೆ ಅನುಶ್ರೀ ಜತೆ ಡ್ಯಾನ್ಸ್ ಮಾಡಿದ್ದಾರೆ. ಶನಿವಾರ – ಭಾನುವಾರ (ನ. 2, 3) ಈ ಸಂಚಿಕೆ ಪ್ರಸಾರವಾಗಲಿದೆ.
ಇಂದು ಐಶ್ವರ್ಯಾ ರೈ ಬಚ್ಚನ್ ಬರ್ತ್‌ಡೆ, ಕೊನೆಗೂ ಅವರಿಬ್ಬರು ವಿಶ್ ಮಾಡಲೇ ಇಲ್ಲ! ಒಂಟಿಯಾದ್ರಾ ಅತಿ ಶ್ರೀಮಂತ ನಟಿ?
ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಡಾಲಿ ಧನಂಜಯ್‌ಗಿರೋ ಆ ಕೊರಗು ಏನು ಗೊತ್ತಾ?