newsics.com
ದೆಹಲಿ: ಮನೆಯ ಹೊರಗೆ ದೀಪಾವಳಿ ಹಬ್ಬ ಆಚರಿಸುತ್ತಿದ್ದ ಇಬ್ಬರನ್ನು ದುಷ್ಕರ್ಮಿಯೊಬ್ಬ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ದೆಹಲಿಯ ಶಾಹದಾರದಲ್ಲಿ ನಡೆದಿದೆ.
ಹಣದ ವಿವಾದದ ಹಿನ್ನೆಲೆ 17 ವರ್ಷದ ಬಾಲಕನೊಬ್ಬ ಮತ್ತೊಬ್ಬ ವ್ಯಕ್ತಿಗೆ ಸುಪಾರಿ ಕೊಟ್ಟು ಹತ್ಯೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಇದೀಗ ಪೊಲೀಸರು ಅಪ್ರಾಪ್ತನನ್ನು ಬಂಧಿಸಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೀಡಿಯೋದಲ್ಲಿ 44 ವರ್ಷದ ವ್ಯಕ್ತಿ ಆಕಾಶ್ ಶರ್ಮಾ ಅವರು ತಮ್ಮ ಸೋದರಳಿಯ ರಿಷಬ್ ಶರ್ಮಾ (16) ಹಾಗೂ ಮಗ ಕ್ರಿಶ್ ಶರ್ಮಾ (15) ಅವರೊಂದಿಗೆ ತಮ್ಮ ಮನೆಯ ಹೊರಗೆ ಪಟಾಕಿಗಳನ್ನು ಸಿಡಿಸಿ ದೀಪಾವಳಿ ಆಚರಿಸುತ್ತಿರುವುದು ಕಂಡುಬಂದಿದೆ.
ಸದ್ಯ ಅಪ್ರಾಪ್ತನ ವಿರುದ್ಧ ಪ್ರಕರಣ ದಾಖಲಿಸಿ, ಆತನನ್ನು ಬಂಧಿಸಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.