newsics.com
ಶಿವಮೊಗ್ಗ: ಮೈಮೇಲೆ ಬಿಸಿ ಟೀ ಪಾತ್ರೆ ಬೀಳಿಸಿಕೊಂಡು ಮಗು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.
ರಾಜೇಶ್ ಹಾಗೂ ಅಶ್ವಿನಿ ದಂಪತಿ ಮಗ 2 ವರ್ಷದ ಅಥರ್ವ ಮೃತ ಮಗು. ಕಳೆದ ವಾರ ರಾಜೇಶ್ ಅವರ ಪಕ್ಕದ ಮನೆಯಲ್ಲಿ ಸಾವು ಸಂಭವಿಸಿತ್ತು. ಸಾವನ್ನಪ್ಪಿದವರ ಅಂತಿಮ ದರ್ಶನಕ್ಕೆ ಬಂದಿದ್ದ ಸಂಬಂಧಿಕರಿಗೆ ಚಹಾ ಮಾಡಲು ಅಶ್ವಿನಿ ಮುಂದಾಗಿದ್ದರು. ಈ ವೇಳೆ ಟೀ ಪಾತ್ರೆ ಮೈಮೇಲೆ ಬಿದ್ದು, ಮಗ ಅಥರ್ವ ಗಂಭೀರವಾಗಿ ಗಾಯಗೊಂಡಿದ್ದ. ತಕ್ಷಣ ಮಗುವನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಒಂದು ವರದಿಂದ ಚಿಕಿತ್ಸೆ ಪಡೆಯುತ್ತಿದ್ದ ಮಗು ಚಿಕಿತ್ಸೆ ಫಲಿಸದೇ ಇಂದು ಬೆಳಿಗ್ಗೆ ಕೊನೆಯುಸಿರೆಳೆದಿದೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.