newsics.com
ನವದೆಹಲಿ: ಬ್ಲಿಂಕಿಟ್ ಮೂಲಕ 1 ಗ್ರಾಂ ಚಿನ್ನದ ನಾಣ್ಯ ಆರ್ಡರ್ ಮಾಡಿದ್ದ ವ್ಯಕ್ತಿಗೆ ಅರ್ಧ ಗ್ರಾಂ ಚಿನ್ನದ ನಾಣ್ಯವನ್ನು ಕಳುಹಿಸಿರುವ ಘಟನೆ ನಡೆದಿದೆ.
ದೆಹಲಿಯ ವ್ಯಕ್ತಿಯೊಬ್ಬ ಕ್ವಿಕ್ ಕಾಮರ್ಸ್ ಫ್ಲಾಟ್ಫಾರ್ಮ್ ಬ್ಲಿಂಕಿಟ್ನಲ್ಲಿ 1 ಗ್ರಾಂ ಚಿನ್ನದ ನಾಣ್ಯವನ್ನು ಆರ್ಡರ್ ಮಾಡಿದ್ದ. ಕಂಪನಿ 0.5 ಗ್ರಾಂ ಚಿನ್ನದ ನಾಣ್ಯವನ್ನು ಕಳಿಸಿಕೊಟ್ಟಿದೆ.
ಈ ಬಗ್ಗೆ ಕಂಪನಿಯ ಗಮನಕ್ಕೆ ತರುವ ಹೊತ್ತಿಗಾಗಲೇ ಕಂಪನಿ ಕಂಪ್ಲೇಂಟ್ ವಿಂಡೋವನ್ನು ಕ್ಲೋಸ್ ಮಾಡಿತ್ತು ಎಂದು ಅಳಲು ತೋಡಿಕೊಂಡಿದ್ದಾರೆ. ಬ್ಲಿಂಕಿಟ್ನಿಂದ ಆರ್ಡರ್ ತೆಗೆದುಕೊಳ್ಳುವ ವೇಳೆ ನಾನು ಮನೆಯಲ್ಲಿ ಇದ್ದಿರಲಿಲ್ಲ. ನನ್ನ ಸಹೋದರ ಈ ಆರ್ಡರ್ ಪಡೆದುಕೊಂಡಿದ್ದ ಎಂದು ಹೇಳಿದ್ದಾರೆ.
ಮೋಹಿತ್ ಜೈನ್ ಹೆಸರಿನ ವ್ಯಕ್ತಿ ತಮ್ಮ ಟ್ವಿಟರ್ ಹ್ಯಾಂಡಲ್ನಲ್ಲಿ ಈ ವಿಚಾರ ಪೋಸ್ಟ್ ಮಾಡಿದ್ದಾರೆ. ಮಲಬಾರ್ ಗೋಲ್ಡ್ & ಡೈಮಂಡ್ಸ್ನಿಂದ ಕ್ವಿಕ್ ಕಾಮರ್ಸ್ ವೇದಿಕೆ ಬ್ಲಿಂಕಿಟ್ ಮೂಲಕ 1 ಗ್ರಾಂ ಚಿನ್ನ ಹಾಗೂ 10 ಗ್ರಾಂನ ಬೆಳ್ಳಿ ನಾಣ್ಯವನ್ನು ಆರ್ಡರ್ ಮಾಡಿದ್ದಾರೆ.
ಆ ಬ್ರ್ಯಾಂಡ್ನ 1 ಗ್ರಾಂ ಚಿನ್ನದ ನಾಣ್ಯ ಬೆಲೆ ₹8,249 ಆಗಿದ್ದರೆ 0.5 ಗ್ರಾಂ ನಾಣ್ಯ ₹4,125 ರೂಪಾಯಿ ಆಗಿದೆ. ಕಂಪನಿ ಮಾಡಿದ ತಪ್ಪಿನಿಂದ ವ್ಯಕ್ತಿಗೆ 4124 ರೂಪಾಯಿ ನಷ್ಟವಾಗಿದೆ.
ಬ್ಲಿಂಕಿಟ್ನ ಅಧಿಕೃತ ಹ್ಯಾಂಡಲ್, ಮಲಬಾರ್ ಗೋಲ್ಡ್ & ಡೈಮಂಡ್ನ ಹ್ಯಾಂಡಲ್ ಮತ್ತು ಕೆಲವು ಸುದ್ದಿಸಂಸ್ಥೆಗಳ ಟ್ಯಾಗ್ಗಳ ಜತೆಗೆ ಝೊಮಾಟೊ ಸಂಸ್ಥಾಪಕ ದೀಪಿಂದರ್ ಗೋಯಲ್ (ಬ್ಲಿಂಕಿಟ್ನ ಮಾಲೀಕತ್ವ ಜೊಮಾಟೊ ಬಳಿ ಇದೆ) ಟ್ಯಾಗ್ ಮಾಡಿ ಬರೆದುಕೊಂಡಿದ್ದು, ‘ಬ್ಲಿಂಕಿಟ್ನಿಂದ ನಾನು ಮೋಸ ಹೋಗಿದ್ದೇನೆ..’ ಎಂದು ಬರೆದುಕೊಂಡಿದ್ದಾರೆ.
“ಬ್ಲಿಂಕಿಟ್ನ ಕಸ್ಟಮರ್ ಸಪೋರ್ಟ್ ದಯನೀಯವಾಗಿದೆ. AI ಬಾಟ್ಗಳೊಂದಿಗೆ ಚಾಟ್ ಮಾಡಬೇಕಾಗಿರುವುದರಿಂದ ಬ್ಲಿಂಕಿಟ್ನಿಂದ ನಾನು ತುಂಬಾ ದುಬಾರಿ ವಸ್ತುವನ್ನು ಆರ್ಡರ್ ಮಾಡಿದ್ದು ಇದೇ ಮೊದಲು ಹಾಗೂ ಕೊನೆ’ ಎಂದು ಅವರು ಹೇಳಿದ್ದಾರೆ.
https://x.com/MohitJa30046159/status/1851166151532794036?t=nkU8GnTxHVCSqNKVI1ITRA&s=19
ಮಲಗುವಾಗಲಾದರೂ ಮೊಬೈಲ್ನಿಂದ ದೂರವಿರಿ, ಇಲ್ಲದಿದ್ದರೆ ನಿಮಗೆ ಹೀಗೆಲ್ಲ ಅಪಾಯವಾಗಬಹುದು…
ಉಪಚುನಾವಣೆ ಬಳಿಕ ರಾಜ್ಯದಲ್ಲಿ ರಾಜ್ಯಪಾಲರ ಆಳ್ವಿಕೆ ಜಾರಿ: ಕುಮಾರಸ್ವಾಮಿ ಬಾಂಬ್