newsics.com
ಗಾಜಿಯಾಬಾದ್: ಡಿಜೆ ರಿಪೇರಿಗೆ ಹಣ ಕೊಡದಿದ್ದಕ್ಕೆ ತಾಯಿಯನ್ನೇ ಮಗ ಹತ್ಯೆಗೈದಿದ್ದಾನೆ. ಈ ಘಟನೆ ಗಾಜಿಯಬಾದ್ ನಲ್ಲಿ ನಡೆದಿದೆ.
ಸುಧೀರ್ ಡಿಜೆ ಮಿಕ್ಸರ್ ರಿಪೇರಿ ಮಾಡಲು ತಾಯಿಯ ಬಳಿ 20,000 ರೂ. ಹಣ ಕೇಳಿದ್ದ. ಆದರೆ ಮಹಿಳೆ ಹಣ ನೀಡಲು ನಿರಾಕರಿಸಿದ್ದಳು. ಇದೇ ಕಾರಣಕ್ಕೆ ಆಕೆಯ ಮಗ ಮತ್ತು ಆತನ ಸ್ನೇಹಿತರು ಸೇರಿಕೊಂಡು ಆಕೆಯನ್ನು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆಗೀಡಾದ (Murder) ಮಹಿಳೆಯನ್ನು ಸಂಗೀತಾ ತ್ಯಾಗಿ (47) ಎಂದು ಗುರುತಿಸಲಾಗಿದೆ. ಮಹಿಳೆಯ ಮೃತದೇಹ ಅ.4 ರಂದು ಬೆಳಿಗ್ಗೆ ಗಾಜಿಯಾಬಾದ್‌ನ ಟ್ರೋನಿಕಾ ಸಿಟಿ ಪ್ರದೇಶದಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ತನಿಖೆ ನಡೆಸಿದ್ದ ಪೊಲೀಸರು ಕೊಲೆಯಾದ ಮಹಿಳೆಯ ಪುತ್ರ ಸುಧೀರ್ ಹಾಗೂ ಆತನ ಇಬ್ಬರು ಸ್ನೇಹಿತರಾದ ಅಂಕಿತ್ ಮತ್ತು ಸಚಿನ್ ಎಂಬವರನ್ನು ಬಂಧಿಸಿದ್ದಾರೆ.