newsics.com
ನವದೆಹಲಿ : ಕಚೇರಿಯಲ್ಲಿ ಹೆಚ್ಚು ಹೊತ್ತು ಬ್ರೇಕ್ ತೆಗೆದುಕೊಳ್ಳುತ್ತಾರೆ ಎಂದು ಕೋಪಗೊಂಡ ವ್ಯಕ್ತಿಯೊಬ್ಬ ಮಹಿಳಾ ಸಹೋದ್ಯೋಗಿಯನ್ನು ಕೊಲೆ ಮಾಡಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.
ಟ್ರಾವಿಸ್ ಮೆರಿಲ್ ಎಂಬಾತ ತಮ್ಹರಾ ಕೊಲಾಜೋ ಎಂಬುವವರನ್ನು ಹತ್ಯೆ ಮಾಡಿದ್ದಾರೆ. ಕೊಲಾಜೋ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದು, ಆಕೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಮೆರಿಲ್‌ನನ್ನು ಬಂಧಿಸಿ ಕೊಲಾಜೊ ಅವರ ಜೀವವನ್ನು ಉಳಿಸಲು ಪ್ರಯತ್ನಿಸಿದರೂ ಅದು ಸಾಧ್ಯವಾಗಿಲ್ಲ. ಆಕೆ ಹೆಚ್ಚೆಚ್ಚು ಹೊತ್ತು ಬ್ರೇಕ್ ತೆಗೆದುಕೊಳ್ಳುವುದು ಮತ್ತು ಕೆಲಸದ ಮೇಲೆ ಗಮನ ಕಡಿಮೆಯಾಗಿದ್ದರ ಹಿನ್ನೆಲೆಯಲ್ಲಿ ಕೋಪಗೊಂಡು ತಾನು ಈ ಕೆಲಸ ಮಾಡಿದ್ದೇನೆ ಎಂದು ಆರೋಪಿ ಒಪ್ಪಿಕೊಂಡಿದ್ದಾನೆ.
ಬ್ರೇಕ್ ತೆಗೆದುಕೊಂಡು ಊಟಕ್ಕೆ ಹೋದಾಗಲೂ ಕೂಡ ಆತ ಆಕೆಯನ್ನೇ ನೋಡುತ್ತಾ ಕುಳಿತಿರುತ್ತಿದ್ದ ಹೀಗಾಗಿ ಆಕೆ ಒಮ್ಮೆ ಬೈದಿದ್ದಳು. ಅಷ್ಟೇ ಅಲ್ಲದೆ ಎಚ್ಆರ್ ಬಳಿ ದೂರು ಕೂಡ ನೀಡಿದ್ದಳು ಎನ್ನಲಾಗಿದೆ.