newsics.com
ಒಂದಿಷ್ಟು ದಿನಗಳಿಂದ ಏರಿಕೆಯತ್ತಲೇ ಸಾಗಿ ಆಭರಣ ಪ್ರಿಯರಲ್ಲಿ ಭಯ ಮೂಡಿಸಿದ್ದ ಚಿನ್ನದ ದರ ಇದೀಗ ತುಸು ಇಳಿಕೆಯಾಗಿದೆ.
ಚಿನ್ನದ ಬೆಲೆ ಗ್ರಾಂಗೆ 55 ರೂಪಾಯಿನಷ್ಟು ಭರ್ಜರಿ ಇಳಿಕೆ ಆಗಿದೆ. ಬೆಳ್ಳಿ ಬೆಲೆಯೂ ಕೂಡ ಎರಡು ರೂಪಾಯಿನಷ್ಟು ಕಡಿಮೆ ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ 7,300 ರೂ ಗಡಿಯೊಳಗೆ ಬಂದಿದೆ. ಹೌದು, 8,000 ರೂ ಗಡಿದಾಟಿದ್ದ ಅಪರಂಜಿ ಚಿನ್ನದ ಬೆಲೆಯೂ ತಗ್ಗಿದೆ. ಬೆಳ್ಳಿ ಬೆಲೆ ಬೆಂಗಳೂರನಲ್ಲಿ ಮೊದಲ ಬಾರಿಗೆ 100 ರೂ ಗಡಿ ಮುಟ್ಟಿದೆ.
ಉಳಿದಂತೆ ಇತರೆಡೆ ಬೆಳ್ಳಿ ಬೆಲೆ ಗ್ರಾಂಗೆ 2 ರೂನಷ್ಟು ತಗ್ಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 72,850 ರೂಪಾಯಿ ಇದೆ. 24 ಕ್ಯಾರಟ್ ನ ಅಪರಂಜಿ ಚಿನ್ನದ ಬೆಲೆ 79,470 ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 10,200 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 72,850 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಂಗೆ 10,100 ರೂಪಾಯಿಯಲ್ಲಿ ಇದೆ.
ಇಂದು ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ
- 22 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ: 72,850 ರೂ
- 24 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ: 79,470 ರೂ
- 18 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ: 59,610 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 102 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ: 72,850 ರೂ
- 24 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ: 79,470 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 101 ರೂ