newsics.com
ಢಾಕಾ: ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳ ನೇತೃತ್ವದ ಕ್ರಾಂತಿಯಿಂದ ಅಧಿಕಾರದಿಂದ ಕೆಳಗಿಳಿದ ನಂತರ ಭಾರತಕ್ಕೆ ಪಲಾಯನವಾಗಿದ್ದ ಶೇಖ್ ಹಸೀನಾಗೆ ಬಾಂಗ್ಲಾದೇಶದ ನ್ಯಾಯಾಲ ಇಂದು ಬಂಧನ ವಾರಂಟ್‌ಗೆ ಆದೇಶಿಸಿದೆ.
ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಬಂಧಿಸಿ ನವೆಂಬರ್ 18 ರಂದು ಹಾಜರುಪಡಿಸುವಂತೆ ನ್ಯಾಯಾಲಯ ಆದೇಶಿಸಿದೆ ಎಂದು ಬಾಂಗ್ಲಾದೇಶದ ಅಂತಾರರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿಯ ಮುಖ್ಯ ಪ್ರಾಸಿಕ್ಯೂಟರ್ ಮೊಹಮ್ಮದ್ ತಾಜುಲ್ ಇಸ್ಲಾಂ ತಿಳಿಸಿದರು.
ತನ್ನ ರಾಜಕೀಯ ವಿರೋಧಿಗಳ ಸಾಮೂಹಿಕ ಬಂಧನ, ಕಾನೂನುಬಾಹಿರ ಹತ್ಯೆ ಸೇರಿದಂತೆ ವ್ಯಾಪಕವಾದ ಮಾನವ ಹಕ್ಕುಗಳ ಉಲ್ಲಂಘನೆಯೊಂದಿಗೆ ಹಸೀನಾ ಅವರ 15 ವರ್ಷಗಳ ಆಳ್ವಿಕೆ ಅಂತ್ಯಗೊಂಡಿತ್ತು. ಹಸೀನಾ ಬಾಂಗ್ಲಾದೇಶದಿಂದ ಪಲಾಯನ ಮಾಡಿದ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ನವದೆಹಲಿಯ ಮಿಲಿಟರಿ ವಾಯು ಸೇನೆಯಲ್ಲಿ ಕೊನೆಯ ಬಾರಿಗೆ ಅವರು ಕಾಣಿಸಿಕೊಂಡಿದ್ದರು. ಅವರು ಭಾರತದಲ್ಲಿರುವುದು ಬಾಂಗ್ಲಾದೇಶವನ್ನು ಕೆರಳಿಸಿದೆ.