newsics.com
ಬೆಂಗಳೂರು: ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಟ್ರ್ಯಾಕ್‌ಗೆ ಮರ ಉರುಳಿ, ನೇರಳ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಸಿಬ್ಬಂದಿ ಮರ ತೆರವುಗೊಳಿಸಿದ ಬಳಿಕ ಮೆಟ್ರೋ ಸಂಚಾರ ಮತ್ತೆ ಆರಂಭವಾಯಿತು.
ಎರಡು ದಿನಗಳಿಂದ ಬೆಂಗಳೂರಿನಲ್ಲಿ ವರುಣ ಅಬ್ಬರಿಸುತ್ತಿದ್ದು, ಮಳೆಯ ಪರಿಣಾಮ ನಮ್ಮ ಮೆಟ್ರೋ ರೈಲಿನ ನೇರಳೆ ಬಣ್ಣದ ಮಾರ್ಗದಲ್ಲಿ ಮರವೊಂದು ಟ್ರ್ಯಾಕ್‌ಗೆ ಉರುಳಿ, ಎಸ್‌ವಿ ರೋಡ್ ಹಾಗೂ ಇಂದಿರಾನಗರ ನಡುವೆ ಮೆಟ್ರೋ ಸಂಚಾರ ಸ್ಥಗಿತಗೊಂಡು ವ್ಯತ್ಯಯ ಉಂಟಾಗಿತ್ತು.
ಬುಧವಾರ ಬೆಳಗ್ಗೆ 6:05ರಿಂದ 8 ಗಂಟೆಯವರೆಗೆ ಮೆಟ್ರೋ ಸಂಚಾರ ಸ್ಥಗಿತಗೊಂಡಿತ್ತು. BMRCL ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಮರವನ್ನು ತೆರವುಗೊಳಿಸಿದರು. ಈ ವೇಳೆ ಇಂದಿರಾನಗರ -ಚಲಘಟ್ಟ ಹಾಗೂ ಬೈಯಪ್ಪನಹಳ್ಳಿ – ವೈಟ್‌ಫೀಲ್ಡ್ ನಿಲ್ದಾಣದವರೆಗೆ ಮೆಟ್ರೋ ಸುಗಮ ಸಂಚಾರಗೊಂಡಿದ್ದು, ಈ ಎರಡು ಮೆಟ್ರೋ ನಿಲ್ದಾಣಗಳ ಮಧ್ಯೆ ರೈಲು ಸಂಚಾರ ಸ್ಥಗಿತಗೊಂಡಿತ್ತು. ಇದೀಗ ಎಂದಿನಂತೆ ಮೆಟ್ರೋ ರೈಲು ಸಂಚಾರ ಆರಂಭಗೊಂಡಿದೆ.