Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಬಿಗ್ ಬಾಸ್‌ಗೆ ಸುದೀಪ್ ಗುಡ್‌ಬೈ ಹೇಳಿದ್ದೇಕೆ? ಕಿಚ್ಚನಿಗೆ ಅವಮಾನವಾಯ್ತಾ? ಅನುಮಾನ ಹುಟ್ಟಿಸಿದ ಮಾಜಿ ಸ್ಪರ್ಧಿಯ X ಪೋಸ್ಟ್‌
ಕರ್ನಾಟಕಪ್ರಮುಖಮನರಂಜನೆ

ಬಿಗ್ ಬಾಸ್‌ಗೆ ಸುದೀಪ್ ಗುಡ್‌ಬೈ ಹೇಳಿದ್ದೇಕೆ? ಕಿಚ್ಚನಿಗೆ ಅವಮಾನವಾಯ್ತಾ? ಅನುಮಾನ ಹುಟ್ಟಿಸಿದ ಮಾಜಿ ಸ್ಪರ್ಧಿಯ X ಪೋಸ್ಟ್‌

Share
2 Min Read
SHARE

newsics.com

ಬಿಗ್ ಬಾಸ್ ಕನ್ನಡ ಸತತ 11 ಆವೃತ್ತಿಗಳನ್ನು ನಿರೂಪಕರಾಗಿ ಯಶಸ್ವಿಯಾಗಿರುವ ನಡೆಸಿಕೊಟ್ಟಿರುವ ನಟ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ.

ಬಿಗ್‌ ಬಾಸ್ ಕಾರ್ಯಕ್ರಮ ನಿರೂಪಕನಾಗಿ ಇದೇ ನನ್ನ ಕೊನೆ ಆವೃತ್ತಿ ಎಂದು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದ್ದಾರೆ.

ಸಹಜವಾಗಿಯೇ ಬಿಗ್ ಬಾಸ್ ರಿಯಾಲಿಟಿ ಶೋ ಅಭಿಮಾನಿಗಳಿಗೆ ಮತ್ತು ಸುದೀಪ್ ಅಭಿಮಾನಿಗಳಿಗೆ ಬೇಸರ ತರಿಸಿದೆ. ಕಾರಣವೇನು ಎಂದು ಸುದೀಪ್ ಬಹಿರಂಗಪಡಿಸದೇ ಇದ್ದರೂ, ತಮಗಾದ ಅವಮಾನದಿಂದ ಈ ನಿರ್ಧಾರ ಕೈಗೊಂಡಿದ್ದಾರೆ ಎಂಬ ಮಾತುಗಳು ಈಗ ಕೇಳಿಬರುತ್ತಿವೆ. ಹೀಗಾಗಿ ಸುದೀಪ್ ಅವರ ನಿರ್ಧಾರ ವಿವಾದಕ್ಕೆಡೆಮಾಡಿಕೊಡುವ ಸಾಧ್ಯತೆ ಹೆಚ್ಚಿದೆ.

ಬಿಗ್‌ ಬಾಸ್‌ಗೆ ಸುದೀಪ್ ವಿದಾಯ ಹೇಳಿದ ಬೆನ್ನಲ್ಲೇ ಮಾಜಿ ಸ್ಪರ್ಧಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಸುದೀಪ್ ಅವರ ಜಾಗದಲ್ಲಿ ಮತ್ತೊಬ್ಬರು ಬಿಗ್ ಬಾಸ್ ಕಾರ್ಯಕ್ರಮ ನಿರೂಪಣೆ ಮಾಡುವುದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ ಎನ್ನುವುದು ಬಹುತೇಕ ಮಾಜಿ ಸ್ಪರ್ಧಿಗಳ ಅಭಿಪ್ರಾಯವಾಗಿದೆ.

ಈ ಮಧ್ಯೆ, ಬಿಗ್ ಬಾಸ್ ಮಾಜಿ ಸ್ಪರ್ಧಿ, ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಬಿಗ್‌ಬಾಸ್ ಕಾರ್ಯಕ್ರಮ ನಿರ್ದೇಶಕರ ವಿರುದ್ಧ ಕೋಪಗೊಂಡಿದ್ದಾರೆ.

ಬಿಗ್‌ ಬಾಸ್ ಕಾರ್ಯಕ್ರಮದಿಂದ ಸುದೀಪ್ ಹೊರಬರುವ ನಿರ್ಧಾರ ಘೋಷಣೆ ಬೆನ್ನಲ್ಲೇ ರೂಪೇಶ್ ರಾಜಣ್ಣ ಮಾಡಿರುವ ಟ್ವೀಟ್ ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ.

“ಬಿಗ್ ಬಾಸ್ ಎನ್ನುವ ಕಾರ್ಯಕ್ರಮ ನಡೆಸುವ ಕೆಲವು ಕನ್ನಡ ದ್ರೋಹಿಗಳ ಕಿತ್ತೋದ್ ಆಟಕ್ಕೆ ಕಿಚ್ಚ ಸುದೀಪ್ ಬಿಗ್‌ ಬಾಸ್ ನಿರೂಪಣೆಯನ್ನು ನಿಲ್ಲಿಸಬೇಕಾಗಿದೆ. ಅವರಿಗೆ ಮಾಡಿದ ಅವಮಾನ ಸಹಿಸಲ್ಲ. ಎ ಮುಂಬೈ ಮರಾಠಿ ಹಾಗೂ ತಮಿಳ್ ನಿರ್ದೇಶಕ ಮೊದಲು ಬಿಗ್ ಬಾಸ್ ಬಿಡಿ ಇಲ್ಲ ಬಿಗ್ ಬಾಸ್ ನಿಲ್ಲಬೇಕು, ಅಸಲಿ ವಿಷಯ ನಾಳೆ ಮಾತಾಡ್ತೀನಿ” ಎಂದು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ರೂಪೇಶ್ ರಾಜಣ್ಣ ಎಕ್ಸ್ ಪೋಸ್ಟ್ ನೋಡಿದ ಸುದೀಪ್ ಅಭಿಮಾನಿಗಳಿಗೆ ಹಲವು ಪ್ರಶ್ನೆಗಳು ಕಾಡಲು ಆರಂಭಿಸಿವೆ. ಅಸಲ ಇದ್ದು, ಇದೇ ಕಾರಣಕ್ಕೆ ಸುದೀಪ್ ಕಾರ್ಯಕ್ರಮದಿಂದ ಹೊರಬರಲು ನಿರ್ಧರಿಸಿದ್ದಾರೆ ಎನ್ನುವ ಅನುಮಾನ ಶುರುವಾಗಿದೆ.

ಅಭಿಮಾನಿಗಳಿಗೆ ಬೇಸರ

ಕಿಚ್ಚ ಸುದೀಪ್ ಬಿಗ್‌ ಬಾಸ್‌ನಿಂದ ಹೊರ ಬರ್ತಾರೆ ಎನ್ನುವ ಸುದ್ದಿ ಬಂದ ಬೆನ್ನಲ್ಲೇ ಅಭಿಮಾನಿಗಳು ಬೇಸರಗೊಂಡಿದ್ದಾರೆ. ನಿಮಗಾಗಿಯೇ ಬಿಗ್ ಬಾಸ್ ನೋಡ್ತಿದ್ದೆವು, ನೀವೆ ಇಲ್ಲ ಎಂದ ಮೇಲೆ ಬಿಗ್ ಬಾಸ್ ನೋಡುವುದಿಲ್ಲ ಎಂದು ಹೇಳಿದ್ದಾರೆ.

ಇನ್ನು ಸುದೀಪ್ ಹೊರಬರಲು ಅಸಲಿ ಕಾರಣವೇನು ಎನ್ನುವುದನ್ನು ರೂಪೇಶ್ ರಾಜಣ್ಣ ಇಂದು ಬಹಿರಂಗಪಡಿಸುವುದಾಗಿ ಹೇಳಿದ್ದಾರೆ. ಒಂದು ವೇಳೆ ಅವರು ಹೇಳಿದಂತೆ ನಿರ್ದೇಶಕರಿಂದ ಏನಾದರೂ ಸುದೀಪ್‌ಗೆ ಅವಮಾನವಾಗಿದ್ದರೆ, ಕಾರ್ಯಕ್ರಮದ ಮೇಲೆ ಭಾರೀ ಹೊಡೆತ ಬೀಳುವ ಸಾಧ್ಯತೆ ಇದೆ.

https://x.com/rajanna_rupesh/status/1845534626971865190?t=67CZ0AxLb1R7_8VOkwXKow&s=19

ಬಿಗ್ ಬಾಸ್ ತೊರೆಯಲು ಸುದೀಪ್ ನಿರ್ಧಾರ: ಇದೇ ಕೊನೆಯ ಸೀಸನ್

ವಾಯುಭಾರ ಕುಸಿತ: ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಈ ವಾರಪೂರ್ತಿ ಭಾರೀ ಮಳೆ ಸಾಧ್ಯತೆ

ಸಿಎಂ ಹಾದಿಯಲ್ಲೇ ಖರ್ಗೆ ಕುಟುಂಬ: KIADBಗೆ ವಿವಾದಿತ 5 ಎಕರೆ ಭೂಮಿ ಮರಳಿಸಿದ ಸಿದ್ಧಾರ್ಥ ಟ್ರಸ್ಟ್

TAGGED:Why did Sudeep say goodbye to Bigg Boss? humiliation for Sudeep?
Share This Article
Facebook Twitter Copy Link Print
Previous Article ಜಮ್ಮು-ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ವಾಪಸ್‌ – ಸರ್ಕಾರ ರಚನೆಗೆ ಸಜ್ಜು!
Next Article ಇಂದು ದರ್ಶನ್‌, ಪವಿತ್ರಾ ಜಾಮೀನು ಭವಿಷ್ಯ ನಿರ್ಧಾರ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?