newsics.com
ಥಾಣೆ: ಮೊಬೈಲ್ ನೋಡಬೇಡ ಎಂದು ಪೋಷಕರು ಬೈದಿದ್ದಕ್ಕೆ 15 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.
ತಾಯಿ, ಮೊಬೈಲ್ ಫೋನ್ ಅನ್ನು ಪದೇ ಪದೇ ನೋಡಬೇಡ ಎಂದಿದ್ದಕ್ಕೆ ಅಂಬರ್ ನಾಥ್ ಪ್ರದೇಶದ ಬಾಲಕಿ ಇಲಿ ಪಾಷಾಣ ಸೇವಿಸಿದ್ದಾಳೆ.
ಕುಟುಂಬ ಸದಸ್ಯರು ಆಕೆಯನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದರು. ನಂತರ ಮುಂಬೈನ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿದ್ದಾಳೆ.