newsics.com
ಮುಂಬೈ: ಮ್ಯಾರೇಜ್ ಪ್ಲ್ಯಾನಿಂಗ್ ಬಗ್ಗೆ ಬಾಲಿವುಡ್ ಬ್ಯೂಟಿ ಶ್ರದ್ಧಾ ಕಪೂರ್ ರಿವೀಲ್ ಮಾಡಿದ್ದಾರೆ.
ಸಂದರ್ಶನವೊಂದರಲ್ಲಿ ಶ್ರದ್ಧಾ ಕಪೂರ್ ಲವ್ ಲೈಫ್ ಬಗ್ಗೆ ಬಾಯ್ಬಿಟ್ಟಿದ್ದಾರೆ. ಇತ್ತೀಚೆಗೆ ಖಾಸಗಿ ಚಾನೆಲ್ ಗೆ ನೀಡಿರುವ ಸಂದರ್ಶನವೊಂದರಲ್ಲಿ ರಿಲೇಷನ್‌ಶಿಪ್ ಬಗ್ಗೆ ಕೇಳಿದಾಗ ಯಾವುದೇ ಸಂಕೋಚವಿಲ್ಲದೆ ತಮ್ಮ ಸಂಗಾತಿ ಕುರಿತು ಮಾತನಾಡಿದ್ದಾರೆ.
ನನ್ನ ಸಂಗಾತಿಯೊಂದಿಗೆ ಸಮಯ ಕಳೆಯುವುದು, ಸಿನಿಮಾ ನೋಡುವುದು, ಡಿನ್ನರ್ ಹೋಗುವುದು ಅಥವಾ ಟ್ರಾವೆಲ್ ಮಾಡುವುದು ನನಗೆ ತುಂಬಾ ಇಷ್ಟ ಎಂದು ಶ್ರದ್ಧಾ ಹೇಳಿದ್ದಾರೆ. ಆದರೆ ನಟಿ ಯಾರ ಹೆಸರನ್ನೂ ರಿವೀಲ್ ಮಾಡಿಲ್ಲ.
ಇದೇ ವೇಳೆ ಶ್ರದ್ಧಾ ಖಂಡಿತ ನನಗೆ ಮದುವೆ ಮೇಲೆ ತುಂಬಾ ನಂಬಿಕೆ ಇದೆ. ಆದರೆ ಸರಿಯಾದ ವ್ಯಕ್ತಿ ಸಿಗುವುದು ಮುಖ್ಯ ಎಂದು ತಿಳಿಸಿದ್ದಾರೆ.