Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಬಿಗ್ ಬಾಸ್ ಮನೆಯಲ್ಲಿ ಮಧ್ಯರಾತ್ರಿ ಮುಸುಕುಧಾರಿಗಳಿಂದ ದಾಂಧಲೆ, ಸ್ವರ್ಗ- ನರಕ ಕಾನ್ಸೆಪ್ಟ್ ಅಂತ್ಯ ಸಾಧ್ಯತೆ
ಕರ್ನಾಟಕಪ್ರಮುಖಮನರಂಜನೆ

ಬಿಗ್ ಬಾಸ್ ಮನೆಯಲ್ಲಿ ಮಧ್ಯರಾತ್ರಿ ಮುಸುಕುಧಾರಿಗಳಿಂದ ದಾಂಧಲೆ, ಸ್ವರ್ಗ- ನರಕ ಕಾನ್ಸೆಪ್ಟ್ ಅಂತ್ಯ ಸಾಧ್ಯತೆ

Share
2 Min Read
SHARE

newsics.com
ಮಧ್ಯರಾತ್ರಿ ಬಿಗ್‌ಬಾಸ್ ಮನೆಗೆ ನುಗ್ಗಿದ ಮುಸುಕುಧಾರಿಗಳು ಕೈಗೆ ಸಿಕ್ಕಿದ್ದನ್ನೆಲ್ಲ ಚೆಲ್ಲಾಪಿಲ್ಲಿ ಮಾಡಿದ್ದು, ಸ್ವರ್ಗ-ನರಕದ ಕಲ್ಪನೆಯನ್ನು ನುಚ್ಚುನೂರು‌ ಮಾಡಿದ್ದಾರೆ.

ಕ್ರೇನ್ ಮೂಲಕ ಮನೆ ಒಳಗೆ ಬಂದ ಮುಸುಕುಧಾರಿಗಳು ನರಕದ ವಸ್ತುಗಳನ್ನೆಲ್ಲ ಪೀಸ್ ಪೀಸ್ ಮಾಡಿರುವ ಹಿನ್ನೆಲೆಯಲ್ಲಿ ಇಲ್ಲಿಗೆ ಬಿಗ್ ಬಾಸ್ ಮನೆಯಲ್ಲಿ ನರಕ ಹಾಗೂ ಸ್ವರ್ಗದ ಕಾನ್ಸೆಪ್ಟ್ ಪೂರ್ಣಗೊಂಡಿದೆ ಎಂದೇ ಹೇಳಲಾಗುತ್ತಿದೆ.

ಈಗ ಕಲರ್ಸ್ ವಾಹಿನಿ ಬಿಡುಗಡೆ ಮಾಡಿರುವ ಬಿಗ್ ಬಾಸ್ ಪ್ರೋಮೋ ಈ ಎಲ್ಲ ಸಂಶಯಗಳನ್ನು ಹುಟ್ಟುಹಾಕಿದೆ.

ಈ ಸ್ವರ್ಗ ನರಕದ ಕಾನ್ಸೆಪ್ಟ್‌ಗೆ ತೀವ್ರ ವಿರೋಧವೂ ವ್ಯಕ್ತವಾಗಿತ್ತು. ಮಹಿಳಾ ಆಯೋಗದಲ್ಲಿ ದೂರು ಕೂಡ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಸ್ವರ್ಗ-ನರಕದ ಕಾನ್ಸೆಪ್ಟ್‌ನ್ನು ಕಲರ್ಸ್ ವಾಹಿನಿ ಕೈಬಿಟ್ಟಿದೆ ಎಂದು ಹೇಳಲಾಗುತ್ತಿದೆ.

ಬಿಗ್ ಬಾಸ್ ಮನೆಗೆ ಮುಸುಕುಧಾರಿಗಳು ನುಗ್ಗುತ್ತಿದ್ದಂತೆ ಎಚ್ಚರಿಕೆಯ ಸೈರನ್ ಮೊಳಗಿದೆ. ಅಲ್ಲಿದ್ದ ಸ್ಪರ್ಧಿಗಳು ಭಯ ಪಟ್ಟುಕೊಂಡಂತೆ ವರ್ತಿಸಿರುವುದನ್ನು ಈಗ ಬಿಡುಗಡೆ ಮಾಡಿರುವ ಪ್ರೊಮೋದಲ್ಲಿ ನೋಡಬಹುದು.

ಮುಸುಕುಧಾರಿಗಳು ಬಂದು ನರಕದ ಎಲ್ಲಾ ಸಾಮಗ್ರಿ, ಸರಕರಣೆಗಳನ್ನು ಪೀಸ್ ಪೀಸ್ ಮಾಡಿದ್ದಾರೆ. ಮೇಲಿನಿಂದ ಏನೋ ಒಂದು ವಸ್ತು ಕೆಳಕ್ಕೆ ಬಂದಿದೆ. ಅದನ್ನು ನೋಡಿ ಸ್ಪರ್ಧಿಗಳು ಹೆದರುವಂತೆ ಮಾಡಿದ್ದಾರೆ.
ಕನ್ನಡದ ಬಿಗ್ಬಾಸ್ ಸೀಸನ್ 11 ಹೊಸ ಕಾನ್ಸೆಪ್ಟ್ ಜತೆ ವೀಕ್ಷಕರ ಮನಸ್ಸನ್ನು ರಂಜಿಸುತ್ತಿದೆ. ಈ ಬಾರಿಯ ಹೈಲೈಟೇ ಸ್ವರ್ಗ ಮತ್ತು ನರಕ. ಒಂದಿಷ್ಟು ಮಂದಿಯನ್ನು ಸ್ವರ್ಗಕ್ಕೆ, ಮತ್ತೊಂದಿಷ್ಟು ಮಂದಿಯನ್ನು ನರಕಕ್ಕೆ ಕಳುಹಿಸಲಾಗಿತ್ತು. ಪ್ರತಿ ಬಾರಿಯಂತೆ ಕೂಗಾಟ, ಕಿರುಚಾಟ, ರೊಮಾನ್ಸ್ ಎಲ್ಲವೂ ಈ ಬಾರಿಯೂ ಮುಂದುವರಿದಿದೆ.

ಬಿಗ್ಬಾಸ್ ಅಂದರೇನು ಎಂಬುದು ಈಗಾಗಲೇ ವೀಕ್ಷಕರಿಗೆ ಅರಿವಾಗಿದ್ದರೂ, ಅಲ್ಲಿ ನಡೆಯುವುದೆಲ್ಲಾ ಸತ್ಯ ಎಂಬಂತೆ ನೋಡುವ ದೊಡ್ಡ ವರ್ಗವೇ ಇದೆ ಎನ್ನುವುದಕ್ಕೆ ಇದರ ಟಿಆರ್‌ಪಿ ರೇಟ್ ನೋಡಿದರೆ ತಿಳಿಯುತ್ತದೆ.

ಎಲ್ಲಾ ರಿಯಾಲಿಟಿ ಷೋ, ಸೀರಿಯಲ್ಗಳನ್ನು ಹಿಂದಿಕ್ಕಿ ಈ ಬಾರಿಯೂ ಬಿಗ್ಬಾಸ್ ವಿನ್ ಆಗಿರುವ ಬಗ್ಗೆ ಇದಾಗಲೇ ಸುದೀಪ್ ಅವರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಎಲ್ಲಾ ಭಾಷೆಗಳ ಬಿಗ್ಬಾಸ್‌ನಲ್ಲಿರುವಂತೆಯೇ ಕನ್ನಡದಲ್ಲೂ ಒಂದಿಷ್ಟು ಸಿದ್ಧ ಸೂತ್ರಗಳೇನೂ ಬದಲಾಗಿಲ್ಲ. ಆದರೂ ಈ ಬಾರಿಯ ಹೊಸ ವಿಷಯ ಎಂದರೆ ಸ್ವರ್ಗ ಮತ್ತು ನರಕ.
ಇವೆರಡೂ ಇರುವುದಿಲ್ಲವಾ ಎನ್ನುವ ಸಂಶಯ ಬಿಗ್ಬಾಸ್ ಪ್ರೇಮಿಗಳನ್ನು ಕಾಡುತ್ತಿದೆ.

ಮಾಮೂಲಿನ ಬಿಗ್ಬಾಸ್ನಂತೆ, ಎಲ್ಲರೂ ಒಟ್ಟಾಗಿ ಸ್ಪರ್ಧೆ ಮುಂದುವರಿಸಲಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತಿದೆ. ಈ ಹಿಂದಿನ ಸೀಸನ್ಗಳಲ್ಲಿ ಇದೇ ರೀತಿ ಸಮರ್ಥರು ಹಾಗೂ ಅಸಮರ್ಥರು ಹೆಸರಿನ ಎರಡು ಗುಂಪನ್ನು ಮಾಡಲಾಗಿತ್ತು. ಒಂದು ವಾರ ಈ ಆಟ ನಡೆದಿತ್ತು. ಸಮರ್ಥರಿಗೆ ಮನೆಗಳನ್ನು ಬಳಕೆ ಮಾಡಲು ಅವಕಾಶ ಕಲ್ಪಿಸಲಾಗಿತ್ತು ಮಾತ್ರವಲ್ಲದೇ ಮನೆಯ ಎಲ್ಲಾ ಸೌಲಭ್ಯಗಳನ್ನು ನೀಡಲಾಗಿತ್ತು. ಸಾಮಾನ್ಯ ಬಟ್ಟೆ ಹಾಕಿಕೊಳ್ಳಲು ಅವಕಾಶ ನೀಡಲಾಗಿತ್ತು.

ಅದೇ ರೀತಿ ಅಸಮರ್ಥರು ತಂಡದವರಿಗೆ ಸಮವಸ್ತ್ರ ನೀಡಲಾಗಿತ್ತು. ಅದನ್ನು ಬಿಟ್ಟು ಅವರು ಬೇರೆಯದ್ದನ್ನು ಬಳಸುವಂತೆ ಇರಲಿಲ್ಲ. ಅವರಿಗೆ ಮನೆಯ ಎಲ್ಲಾ ಸೌಲಭ್ಯಗಳನ್ನು ಬಳಕೆ ಮಾಡಲು ಅವಕಾಶ ಇರಲಿಲ್ಲ. ಎಲ್ಲರೂ ನಾಮಿನೇಟ್ ಆಗಿದ್ದು ಇದೇ ತಂಡದಿಂದಲೇ ಆಗಿತ್ತು. ಈ ಟಾಸ್ಕ್ ಒಂದೇ ವಾರಕ್ಕೆ ಮುಗಿದಿತ್ತು. ಅದಕ್ಕಿಂತ ಸ್ವಲ್ಪ ಭಿನ್ನ ಎಂದರೆ ಒಂದು ವಾರದ ಮಟ್ಟಿಗೆ ಸ್ವರ್ಗ ಮತ್ತು ನರಕ ಎನ್ನುವ ಕಾನ್ಸೆಪ್ಟ್ ಈ ಬಾರಿ ಮಾಡಲಾಗಿತ್ತು. ಇದೀಗ ಮುಕ್ತಾಯಗೊಳ್ಳಲಿದೆ ಎಂಬುದು ಪ್ರೊಮೋದಿಂದ ಅರಿವಾಗುತ್ತದೆ.

https://www.instagram.com/reel/DA-U6WGv_Q8/?igsh=ZHM2MG0ydW9lZGRq

ಬಳ್ಳಾರಿ ಜೈಲಿನಿಂದ ನಟ ದರ್ಶನ್ ಬೆಂಗಳೂರಿಗೆ ಶಿಫ್ಟ್ ಸಾಧ್ಯತೆ!

ಮುಡಾ ಕೇಸ್: ಲೋಕಾಯುಕ್ತ ಅಧಿಕಾರಿಗಳಿಂದ ಸಿಎಂ ಬಾಮೈದನ ವಿಚಾರಣೆ

ಇಂಡಿಗೋ ಏರ್‌ಲೈನ್ಸ್ ವಿಮಾನದಲ್ಲಿ ಮಹಿಳೆಗೆ ಕಿರುಕುಳ – ಆರೋಪಿ ಅರೆಸ್ಟ್‌

TAGGED:In the Bigg Boss housethere is a possibility of an end to the heaven-hell concept
Share This Article
Facebook Twitter Copy Link Print
Previous Article ಬಳ್ಳಾರಿ ಜೈಲಿನಿಂದ ನಟ ದರ್ಶನ್ ಬೆಂಗಳೂರಿಗೆ ಶಿಫ್ಟ್ ಸಾಧ್ಯತೆ!
Next Article ಮಗು ಮುಖ ರಿವೀಲ್; ಕವಿತಾ-ಚಂದನ್ ಮಗ ಹೇಗಿದ್ದಾನೆ ನೋಡಿ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?