newsics.com
ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಹಾಗೂ A4 ಆರೋಪಿಯಾಗಿರುವ ದೇವರಾಜು ಅವರನ್ನು ಗುರುವಾರ ಲೋಕಾಯುಕ್ತ ಅಧಿಕಾರಿಗಳು ಸತತ 10 ಗಂಟೆಗಳ ವಿಚಾರಣೆ ನಡೆಸಿದರು.
ಮೈಸೂರು ಲೋಕಾಯುಕ್ತ ಪೊಲಿಸರು ಈಗಾಗಲೇ ಕೆಸರ ಜಮೀನು ಹಾಗೂ ನಿವೇಶನ ಪಡೆದ ವಿಜಯನಗರ ಸ್ಥಳ ಮಹಜರು ನಡೆಸಿದ್ದು, ಈ ಬಗ್ಗೆ ತನಿಖೆಗೆ ಹಾಜರಾಗುವಂತೆ ಲೋಕಾಯುಕ್ತ ಅಧಿಕಾರಿಗಳು ಬುಧವಾರ ಮಲ್ಲಿಕಾರ್ಜುನ ಸ್ವಾಮಿ ಮತ್ತು ದೇವರಾಜು ಅವರಿಗೆ ನೋಟಿಸ್ ಜಾರಿ ಮಾಡಿದ್ದರು. ಅಂತೆಯೇ ಲೋಕಾಯಕ್ತ ವಿಚಾರಣೆಗೆ ಇಬ್ಬರೂ ಹಾಜರಾಗಿದ್ದರು.
ಬೆಳಿಗ್ಗೆ 11ರಿಂದ ರಾತ್ರಿ 8ರವರೆಗೆ ಜೆ. ದೇವರಾಜು ಅವರನ್ನು ಹಾಗೂ ಬೆಳಿಗ್ಗೆ 11.30ರಿಂದ ರಾತ್ರಿ 9ರವರೆಗೆ ಮಲ್ಲಿಕಾರ್ಜುನ ಸ್ವಾಮಿ ಅವರನ್ನು ಲೋಕಾಯುಕ್ತ ಎಸ್‌ಪಿ ಟಿ.ಜೆ. ಉದೇಶ್ ನೇತೃತ್ವದ ತಂಡವು ವಿಚಾರಣೆಗೆ ಒಳಪಡಿಸಿತು. ಮಧ್ಯಾಹ್ನ ಕಚೇರಿಯಲ್ಲೇ ಊಟ ತರಿಸಿಕೊಟ್ಟು, ಇಬ್ಬರಿಗೂ ಹಲವು ಪ್ರಶ್ನೆಗಳನ್ನು ಮುಂದಿಟ್ಟಿತು. ಅಧಿಕಾರಿಗಳ ನಿರಂತರ ಪ್ರಶ್ನೆಗಳಿಗೆ ಆರೋಪಿಗಳು ಬೆವರಿದರು.