newsics.com
ಮುಂಬೈ : ಆಸ್ಟ್ರೇಲಿಯಾದ ಜನಪ್ರಿಯ ಕ್ರಿಕೆಟಿಗ ಡೇವಿಡ್ ತೆಲುಗು ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ.
ಆಸ್ಟ್ರೇಲಿಯಾದ ಜನಪ್ರಿಯ ಕ್ರಿಕೆಟಿಗ ಡೇವಿಡ್ ವಾರ್ನರ್ಗೆ ತೆಲುಗು ಸಿನಿಮಾಗಳೆಂದರೆ ಬಹಳ ಅಚ್ಚು-ಮೆಚ್ಚು. ಕೋವಿಡ್ ಸಮಯದಲ್ಲಿ ಹಲವಾರು ತೆಲುಗು ಸಿನಿಮಾಗಳ ಹಾಡುಗಳು, ಡೈಲಾಗ್ಗಳ ರೀಲ್ಸ್ಗಳನ್ನು ಡೇವಿಡ್ ಮಾಡಿದ್ದರು. ಇದೀಗ ಡೇವಿಡ್ ತೆಲುಗು ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ.
ಡೇವಿಡ್ ವಾರ್ನರ್, ತೆಲುಗಿನ ಜನಪ್ರಿಯ ನಟ ‘ಜಯಂ’ ಖ್ಯಾತಿಯ ನಿತಿನ್ ನಟಿಸುತ್ತಿರುವ ‘ರಾಬಿನ್ಹುಡ್’ ಸಿನಿಮಾದಲ್ಲಿ ನಟಿಸುತ್ತಿದ್ದಾರಂತೆ. ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದ್ದು ಡೇವಿಡ್ ವಾರ್ನರ್ ‘ರಾಬಿನ್ ಹುಡ್’ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರಂತೆ. ಸಿನಿಮಾದ ಮುಖ್ಯ ವಿಲನ್ ಸಹ ಆಗಿದ್ದಾರೆ ಡೇವಿಡ್ ವಾರ್ನರ್ ಎನ್ನಲಾಗುತ್ತಿದೆ. ಡೇವಿಡ್ ವಾರ್ನರ್ಗಾಗಿ ಆಕ್ಷನ್ ಜೊತೆಗೆ ಕೆಲವು ಹಾಸ್ಯ ದೃಶ್ಯಗಳನ್ನು ಸಹ ಸೃಷ್ಟಿಸಲಾಗಿದೆಯಂತೆ.
ಕ್ರಿಕೆಟಿಗರು ಸಿನಿಮಾಗಳಲ್ಲಿ ನಟಿಸುವುದು ಹೊಸದೇನೂ ಅಲ್ಲ. ಈ ಹಿಂದೆ ಹಲವು ಭಾರತೀಯ ಕ್ರಿಕೆಟಿಗರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ವಿದೇಶಿ ಕ್ರಿಕೆಟಿಗರು ಭಾರತದ ಸಿನಿಮಾದಲ್ಲಿ ಅದರಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದಿಲ್ಲ. ಇದೀಗ ಡೇವಿಡ್ ವಾರ್ನರ್ ತೆಲುಗು ಸಿನಿಮಾದಲ್ಲಿ ವಿಲನ್ ಪಾತ್ರ ಮಾಡುವ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.