newsics.com
ಬೆಂಗಳೂರು : ಬೀದರ್‌ನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸದಸ್ಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬಸ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಈ ದುರಂತ ನಡೆದಿದೆ. ತೆಲಂಗಾಣ ಮೂಲದ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದು, ಗಂಡ, ಹೆಂಡತಿ ಹಾಗೂ ಮಗ ಸೇರಿ ನಾಲ್ಕು ಜನ ಸ್ಥಳದಲ್ಲೇ ಭೀಕರ ಅಂತ್ಯ ಕಂಡಿದ್ದಾರೆ.
ಬೀದರ್‌ನ ದೇವ ದೇವವನ ಪಾರ್ಕ್ ಬಳಿ ಈ ಘಟನೆ ನಡೆದಿದ್ದು, ಜಗನ್ನಾಥ (35), ರೇಣುಕಾ (34), ವಿನೋದ್ ಕುಮಾರ್ (14) ಮೃತ ದುರ್ದೈವಿಗಳು ಎಂದು ತಿಳಿದುಬಂದಿದೆ. ಮೃತರು ತೆಲಂಗಾಣ ರಾಜ್ಯದ ಸಂಗಾರೆಡ್ಡಿ ಜಿಲ್ಲೆಯ ಗಣೇಶಪುರ ಗ್ರಾಮದವರು ಎಂದು ತಿಳಿದುಬಂದಿದೆ.ನಾಲ್ವರು ಒಂದೇ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಬೈಕ್ ಮತ್ತು ಬಸ್ ಮುಖಾಮುಖಿಯಾಗಿ ಈ ದುರಂತ ಸಂಭವಿಸಿದೆ.