newsics.com
ಆಂಧ್ರಪ್ರದೇಶ : ಇಲ್ಲೊಂದು ಕಡೆ 3 ರೂಪಾಯಿಗೆ ಅನ್‌ಲಿಮಿಟೆಡ್ ಬಿರಿಯಾನಿ ನೀಡುವುದಾಗಿ ವಿಶೇಷ ಆಫರ್ ಒಂದನ್ನು ನೀಡಲಾಗಿದ್ದು, ಈ ಮೂರು ರೂಪಾಯಿ ಬಿರಿಯಾನಿ ತಿನ್ನಲು ಹೊಟೇಲ್ ಮುಂದೆ ಜನ ಸಾಗರವೇ ಜಮಾಯಿಸಿದೆ. ಈ ಸುದ್ದಿ ಇದೀಗ ಸಖತ್ ವೈರಲ್ ಆಗುತ್ತಿದೆ.
ಆಂಧ್ರಪ್ರದೇಶದ ಏಲೂರು ಜಿಲ್ಲೆಯ ಜಂಗಾರೆಡ್ಡಿಗುಂಡೆನಲ್ಲಿ ಹೊಸ ರೆಸ್ಟೋರೆಂಟ್ ಉದ್ಘಾಟನೆಯ ಪ್ರಯುಕ್ತ ರೆಸ್ಟೋರೆಂಟ್ ಮಾಲೀಕ 3 ರೂಪಾಯಿಗೆ ಅನ್‌ಲಿಮಿಟೆಡ್ ಕೊಡುವುದಾಗಿ ಬಿಗ್ ಆಫರ್ ಒಂದನ್ನು ನೀಡಿದ್ದು, ಈ ಕಮ್ಮಿ ಬೆಲೆಯ ಭರ್ಜರಿ ಭೋಜನವನ್ನು ಸವಿಯಲು ಬಿರಿಯಾನಿ ಪ್ರಿಯರು ಕ್ಯೂನಲ್ಲಿ ಬಂದಿದ್ದಾರೆ.
ರೆಸ್ಟೋರೆಂಟ್ ಉದ್ಘಾಟನೆಯ ದಿನ ಬೆಳಗ್ಗೆ 9 ಗಂಟೆಯಿಂದ 12 ಗಂಟೆಯವರೆಗೆ 3 ರೂಪಾಯಿಗೆ ಅನ್‌ಲಿಮಿಟೆಡ್ ಬಿರಿಯಾನಿ ಸೇರಿದಂತೆ ಹಲವು ಆಫರ್‌ಗಳ ಜಾಹಿರಾತು ಜಾಹೀರಾತು ಸಿಕ್ಕಾಪಟ್ಟೆ ಪ್ರಚಾರವನ್ನು ಪಡೆದುಕೊಂಡಿದ್ದು, ರೆಸ್ಟೋರೆಂಟ್ ಉದ್ಘಾಟನೆಯ ದಿನ ಅಂದರೆ ಶನಿವಾರ (ಅ.5) ಬಿರಿಯಾನಿ ಸವಿಯಲು ಜನ ಸಾಗರವೇ ಸೇರಿತ್ತು. ಸುಮಾರು 4,000 ರಿಂದ 5,000 ಜನರು ಈ ಭರ್ಜರಿ ಆಫರ್ ಅನ್ನು ಪಡೆದುಕೊಂಡಿದ್ದಾರೆ.