newsics.com
ಸ್ವರ್ಗ ಹಾಗೂ ನರಕ ಪರಿಕಲ್ಪನೆಯಲ್ಲಿ ಈ ಬಾರಿಯ ಬಿಗ್ ಬಾಸ್ ಮನೆ ಆರಂಭದಲ್ಲೇ ರಣಾಂಗಣವಾಗುತ್ತಿದೆ. ನರಕದಲ್ಲಿರುವ ಸ್ಪರ್ಧಿ ಚೈತ್ರಾ ಕುಂದಾಪುರ ಈಗಾಗಲೇ ಸ್ವರ್ಗವಾಸಿಗಳಿಗೆ ನರಕ ತೋರಿಸಿದ್ದಾರೆ.
ಆರಂಭದಲ್ಲೇ ಬಿಗ್ ಬಾಸ್ ಮನೆಯ ಕಲರ್‌ಫುಲ್ ವಾತಾವರಣ ಬಿಸಿ ಏರಿಸಿದ ಚೈತ್ರಾ ಕುಂದಾಪುರ ಇದೀಗ ನಾಮಿನೇಟ್ ಆಗಿದ್ದಾರೆ. ಈ ಮೂಲಕ ಬಿಗ್ ಬಾಸ್ 11ರ ಮೊದಲ ವಾರದಲ್ಲಿ ನಾಮಿನೇಟ್ ಆದ ಮೊದಲ ಮತ್ತು ಏಕೈಕ ಸ್ಪರ್ಧಿಯಾಗಿದ್ದಾರೆ.
ಚೈತ್ರಾ ಕುಂದಾಪುರ ಎಲಿಮಿನೇಶನ್‌ಗೆ ಸ್ವರ್ಗವಾಸಿಗಳು ಒಕ್ಕೊರಲಿನಿಂದ ಮತ ಹಾಕಿದ್ದಾರೆ. ಆದರೆ ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ ಆಟಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಪರ ವಿರೋಧಗಳಿದ್ದರೂ ಆಟದ ವಿಚಾರದಲ್ಲಿ ಚೈತ್ರಾ ಕುಂದಾಪುರ ಜನರಿಂದ ಹೆಚ್ಚಿನ ಮತ ಪಡೆಯುವ ಸಾಧ್ಯತೆಗಳಿವೆ.
ಚೈತ್ರಾ ಕುಂದಾಪುರ ಗೂಗ್ಲಿಗೆ ಆರಾಮವಾಗಿದ್ದ ಸ್ವರ್ಗವಾಸಿಗಳು ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಚೈತ್ರಾ ಮಾತು, ಗೇಮ್ ಪ್ಲಾನ್‌ಗೆ ಸ್ವರ್ವವಾಸಿಗಳು ಕಕ್ಕಾಬಿಕ್ಕಿಯಾಗಿದ್ದಾರೆ. ಸ್ವರ್ಗವಾಸಿಗಳಿಗಿಂತ ನರಕವಾಸಿಗಳೇ ಹೆಚ್ಚಿನ ಖುಷಿ, ಸಂಭ್ರಮದಲ್ಲಿರುವಂತೆ ಕಂಡುಬಂತು.
ಹಣ್ಣು ತೊಳೆದುಕೊಡುವಂತೆ ಉಗ್ರಂ ಮಂಜು ನೀಡಿದ ಆಜ್ಞೆಯಿಂದ ಚೈತ್ರಾ ಕುಂದಾಪುರ ಅಸಮಾಧಾನಗೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ಚೈತ್ರಾ ಕುಂದಾಪುರ ಹಣ್ಣು ತೊಳೆಯುವ ಬದಲು ಹಣ್ಣನ್ನು ಕಚ್ಚಿ ಎಸೆದಿದ್ದಾರೆ. ನಿಯಮ ಮೀರಿದ ಹಾಗೂ ದರ್ಪದ ನಡೆಗೆ ಉಗ್ರಂ ಮಂಜು ಸೇರಿ ಸ್ವರ್ಗವಾಸಿಗಳು ಗರಂ ಆಗಿದ್ದರು. ಆದರೆ ಚೈತ್ರಾ ಮಾತಿನೆದುರು ಸುಸ್ತಾಗಿದ್ದಾರೆ. ಇದರಿಂದಾಗಿ ಸ್ವರ್ಗವಾಸಿಗಳ ಲಕ್ಷುರಿ ಐಟಂಗೆ ಕತ್ತರಿ ಬಿದ್ದಿದೆ.
ಅಕ್ಟೋಬರ್ 24ರಿಂದ ನವೆಂಬರ್ 3ರವರೆಗೆ ಹಾಸನಾಂಬಾ ದೇವಿ ದರ್ಶನ: 20 ಲಕ್ಷ ಭಕ್ತರಾಗಮನ ನಿರೀಕ್ಷೆ
ಮುಡಾ ಕೇಸ್: 14 ಸೈಟ್ ಮುಡಾಗೆ ಹಿಂದಿರುಗಿಸುವುದಾಗಿ ಸಿಎಂ ಪತ್ನಿ ಪತ್ರ!