newsics.com
ಮುಂಬೈ: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರವು ಸ್ಥಳೀಯ ಹಸುವಿಗೆ ‘ರಾಜಮಾತೆ’ ಸ್ಥಾನಮಾನ ನೀಡಿದೆ.
ಇನ್ನು ವೇದಗಳ ಕಾಲದಿಂದಲೂ ಭಾರತೀಯ ಸಂಸ್ಕೃತಿಯಲ್ಲಿ ದೇಶಿ ಗೋವಿನ ಸ್ಥಾನಮಾನ, ಮಾನವನ ಆಹಾರದಲ್ಲಿ ದೇಶಿ ಗೋವಿನ ಹಾಲಿನ ಉಪಯುಕ್ತತೆ, ಆಯುರ್ವೇದ ಔಷಧದಲ್ಲಿ ಗೋಮೂತ್ರ ಮತ್ತು ಗೋಮೂತ್ರದ ಪ್ರಮುಖ ಸ್ಥಾನ, ಪಂಚಗವ್ಯ ಚಿಕಿತ್ಸಾ ವ್ಯವಸ್ಥೆ ಮತ್ತು ಸಾವಯವ ಕೃಷಿ ಪದ್ಧತಿಗಳನ್ನು ಗಮನದಲ್ಲಿಟ್ಟುಕೊಂಡು ಇನ್ಮುಂದೆ ದೇಶಿ ಗೋವುಗಳನ್ನು ‘ರಾಜಮಾತಾ ಗೋಮಾತೆ’ ಎಂದು ಕರೆಯಲು ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಸರ್ಕಾರದ ಈ ನಿರ್ಧಾರವು ಭಾರತೀಯ ಸಮಾಜದಲ್ಲಿ ಗೋವಿನ ಆಧ್ಯಾತ್ಮಿಕ, ವೈಜ್ಞಾನಿಕ ಮತ್ತು ಐತಿಹಾಸಿಕ ಮಹತ್ವವನ್ನು ಒತ್ತಿಹೇಳುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.