newsics.com
ಬಳ್ಳಾರಿ: ನಟ ದರ್ಶನ್ ಅವರು ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿ ಮೂರು ವಾರವಾದರೂ ದರ್ಶನ್ ಅವರನ್ನು ಭೇಟಿ ಮಾಡೋಕೆ ಅವರ ತಾಯಿ ಬಂದಿರಲಿಲ್ಲ.
ಆದರೆ ಇಂದು ಗುರುವಾರ ದರ್ಶನ್ ಭೇಟಿಗೆ ತಾಯಿ ಮೀನಾ ತೂಗುದೀಪ ಬಳ್ಳಾರಿ ಜೈಲಿಗೆ ಆಗಮಿಸಿದ್ದಾರೆ. ದರ್ಶನ್ ಭೇಟಿಯಾಗೋಕೆ ಪತ್ನಿ ವಿಜಯಲಕ್ಷ್ಮಿ ಅವರು ಭೇಟಿ ಕೊಡುತ್ತಿದ್ದರೂ ಕೂಡ ಬೇರೆ ಯಾರೂ ಅಷ್ಟು ಸುಲಭವಾಗಿ ಭೇಟಿ ಮಾಡಲು ಸಾಧ್ಯವಾಗುತ್ತಿರಲಿಲ್ಲ.
ಬೆಂಗಳೂರಿನಿಂದ ಬಳ್ಳಾರಿ ಜೈಲು ದೂರ ಇರುವ ಕಾರಣ ದರ್ಶನ್ ಅವರನ್ನು ಭೇಟಿ ಮಾಡುವುದು ಅವರ ಕುಟುಂಬಸ್ಥರಿಗೂ ಸಮಸ್ಯೆಯಾಗಿದೆ. ಹೀಗಿದ್ದರೂ ಕೂಡ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ನಿಯಮಿತವಾಗಿ ಬಂದು ಪತಿಯನ್ನು ಭೇಟಿ ಮಾಡಿ ಹೋಗುತ್ತಿದ್ದಾರೆ.
ಬೆಂಗಳೂರಿನಿಂದ ಬಳ್ಳಾರಿಗೆ 300ಕಿಮೀ ಅಂತರವಿರುವ ಕಾರಣ ತಾಯಿ ಮೀನಾ ತೂಗುದೀಪ್ ದರ್ಶನ್ ಅವರನ್ನು ಭೇಟಿ ಮಾಡಿರಲಿಲ್ಲ. ಇದೀಗ ದರ್ಶನ್ ಅವರನ್ನ ಭೇಟಿ ಮಾಡಲು ದರ್ಶನ್ ತಾಯಿ ಮೀನಾ ತೂಗುದೀಪ ಬಳ್ಳಾರಿ ಜೈಲಿಗೆ ಆಗಮಿಸಿದ್ದಾರೆ. ಅಕ್ಕ, ಭಾವ ಮತ್ತು ಅವರ ಮಕ್ಕಳ ಜತೆಗೆ ಕೇಂದ್ರ ಕಾರಾಗೃಹಕ್ಕೆ ಬಂದಿದ್ದಾರೆ.
ದರ್ಶನ್ ನೋಡಲು ಮೊನ್ನೆಯಷ್ಟೇ ಪತ್ನಿ ವಿಜಯಲಕ್ಷ್ಮಿ ಬಳ್ಳಾರಿ ಜೈಲಿಗೆ ಬರುವಾಗ ದರ್ಶನ್ ಗಾಗಿ ಹೊಸ ಬಟ್ಟೆಯನ್ನು ತಂದಿದ್ದರು. ಇದೀಗ ದರ್ಶನ್ ನೋಡಲು ಬಂದ ವೇಳೆ ತಾಯಿ ಮೀನಾ ತೂಗುದೀಪ ಮತ್ತು ಕುಟುಂಬಸ್ಥರು ಕೈಯಲ್ಲಿ ಎರಡು ಬ್ಯಾಗ್ ತಂದಿದ್ದಾರೆ. ಸ್ವೀಟ್ಸ್, ಊಟದ ಬಾಕ್ಸ್, ಹಣ್ಣು ತಂದಿದ್ದಾರೆ.
ದರ್ಶನ್ ಕೂಡ ತಾಯಿಯನ್ನು ನೋಡುವ ಹಂಬಲ ವ್ಯಕ್ತಪಡಿಸಿದ್ದರು. ತಾಯಿ, ಅಕ್ಕ, ಭಾವ ಮತ್ತು ಅವರ ಮಕ್ಕಳನ್ನುನೋಡಲು ಓಡೋಡಿ ಬಂದ ನಟ ದರ್ಶನ್ ಕಣ್ಣೀರು ಹಾಕಿದ್ದಾರೆ. ಈ ವೇಳೆ ದರ್ಶನ್ ಅವರನ್ನು ಕುಟುಂಬದವರು ಆರೋಗ್ಯ ವಿಚಾರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನೀವು ಮಲಗೋದು ಹೇಗೆ? ನಿಮ್ಮ ನಿದ್ರಾ ಭಂಗಿಯಿಂದಲೇ ಗೊತ್ತಾಗತ್ತೆ ನಿಮ್ಮ ವ್ಯಕ್ತಿತ್ವ!