newsics.com
ನವದೆಹಲಿ: ಮಾಡರ್ನಾ ಪಾರ್ಮಾಸುಟಿಕಲ್ಸ್ ಕಂಪನಿ ಕ್ಯಾನ್ಸರ್‌ಗೆ ಹೊಸ ಲಸಿಕೆ ಕಂಡು ಹಿಡಿದಿದೆ.
ಈ ಲಸಿಕೆ ಕ್ಯಾನ್ಸರ್ ರೋಗದ ಅಧ್ಯಯನ ಹಾಗೂ ಸಂಶೋಧನೆಯಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದೆ.
ಈ ಮೂಲಕ ಮಾಡರ್ನಾ ಪಾರ್ಮಾಸುಟಿಕಲ್ಸ್ ಕಂಪನಿ ರೋಗಿಗಳಲ್ಲಿ ಹೊಸ ಆಶಾಭಾವ ಮೂಡಿಸಿದೆ.
ಕೋವಿಡ್ ವ್ಯಾಕ್ಸಿನ್ ತಯಾರಿಕೆಯಲ್ಲಿ ಬಳಸಲಾದ mRNA ತಂತ್ರಜ್ಞಾನವನ್ನೇ ಬಳಸಿ ಈ ಒಂದು ಲಸಿಕೆಯನ್ನು ತಯಾರಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಸದ್ಯ ಕಂಡುಹಿಡಿದಿರುವ ಈ ವ್ಯಾಕ್ಸಿನ್‌ಗೆ mRNA-4359 ಎಂದು ಹೆಸರಿಡಲಾಗಿದೆ. ಕೊರೊನಾ ಲಸಿಕೆ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿ ದೇಹದಲ್ಲಿರುವ ಆರೋಗ್ಯಕರ ಸೆಲ್ಸ್‌ಗಳನ್ನು ಅಪಾಯದಿಂದ ಪ್ರತ್ಯೇಕಿಸುತ್ತಿತ್ತು. ಇದೇ ಮಾದರಿಯ ಲಸಿಕೆಯನ್ನು ಈಗ ಕ್ಯಾನ್ಸರ್ ಲಸಿಕೆಯ ತಯಾರಿಕೆಯಲ್ಲೂ ವಿಸ್ತರಿಸಲಾಗಿದೆ.
ಆರಂಭಿಕ ಹಂತದ ಕ್ಲಿನಿಕಲ್ ಟ್ರಯಲ್ನಲ್ಲಿ ದೊಡ್ಡ ಮಟ್ಟದ ಟ್ಯೂಮರ್ ಹೊಂದಿದ್ದ 19 ರೋಗಿಗಳು ಹಾಗೂ ಕ್ಯಾನ್ಸರ್ ಟ್ಯೂಮರ್ ಈಗಷ್ಟೇ ವೃದ್ಧಿಯಾಗುತ್ತಿರುವ 8 ರೋಗಿಗಳ ಮೇಲೆ ಈ ಲಸಿಕೆ ಪ್ರಯೋಗಿಸಲಾಗಿದ್ದು ಯಾವುದೇ ಅಡ್ಡಪರಿಣಾಮವಿಲ್ಲದೆ ಲಸಿಕೆ ರೋಗಿಗಳ ಮೇಲೆ ಉತ್ತಮ ಪರಿಣಾಮ ಬೀರುತ್ತಿದೆ ಎಂದು ಹೇಳಲಾಗಿದೆ.
ವ್ಯಾಕ್ಸಿನ್ ಟ್ರಯಲ್‌ನ ಮುಖ್ಯ ತನಿಖಾಧಿಕಾರಿ ಡಾ. ದೇಬಾಶಿಸ್ ಸರ್ಕೇರ್, ಅಡ್ವಾನ್ಸ್ ಕ್ಯಾನ್ಸರ್ ವಿರುದ್ಧದ ಹೋರಾಟಕ್ಕೆ ಇದೊಂದು ಪ್ರಮುಖ ಅಸ್ತ್ರ. ಯಾವುದೇ ಅಡ್ಡಪರಿಣಾಮಗಳಿಲ್ಲದೇ ರೋಗವಾಸಿ ಮಾಡುವತ್ತ ಈ ಒಂದು ಹೊಸ ಅಧ್ಯಯನ ಸಾಗಿದೆ ಎಂದು ಹೇಳಿದ್ದಾರೆ.