newsics.com
ಬೆಂಗಳೂರು : ಸ್ಯಾಂಡಲ್ವುಡ್ ನಟಿ ರಮ್ಯಾಗೆ ಕಂಕಣ ಭಾಗ್ಯ ಕೂಡಿ ಬಂದಿದೆಯಂತೆ. ಹುಡುಗ ಯಾರು ಎಂದು ಫಾನ್ಸ್ ಕೇಳುತಿದ್ದಾರೆ.
ಇಷ್ಟರಲ್ಲೇ ನಿಶ್ಚಿತಾರ್ಥ ಕಾರ್ಯಕ್ರಮ ಕೂಡ ನಡೆಯಲಿದೆ ಎನ್ನಲಾಗಿದೆ. ನಟಿ ರಮ್ಯಾ ಅವರು ಇದೇ ನವೆಂಬರ್ ತಿಂಗಳಲ್ಲಿ ಹಸೆಮಣೆ ಏರುವ ಸಾಧ್ಯತೆ ಇದೆ. ಸ್ಯಾಂಡಲ್ವುಡ್ ಕ್ವೀನ್ ಮದುವೆ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಸದ್ಯದ ಮಾಹಿತಿ ಪ್ರಕಾರ ಚೌಧರಿ ಗಾರ್ಮೆಂಟ್ಸ್ ಮಾಲೀಕ ಪ್ರಭವ್ ಚೌಧರಿ ಅವರನ್ನು ರಮ್ಯಾ ವಿವಾಹ ಆಗಲಿದ್ದಾರೆ ಎನ್ನಲಾಗಿದೆ.
ಸುಮಾರು 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ರಮ್ಯಾ ಕನ್ನಡ, ತೆಲುಗು, ತಮಿಳು ಚಿತ್ರರಂಗದಲ್ಲೂ ಮಿಂಚಿದ್ದಾರೆ.
ಖಾಸಗಿ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿರುವ ರಮ್ಯಾ, ಇದೊಂದು ವದಂತಿ ಎಂದು ಹೇಳಿದ್ದಾರೆ. ಪ್ರತಿಬಾರಿಯೂ ತಮ್ಮ ಮದುವೆ ಸುದ್ದಿಯನ್ನು ಅಲ್ಲಗೆಳೆಯುತ್ತಾ ಬರುತ್ತಿರುವ ರಮ್ಯಾ, ಈ ಬಾರಿಯೂ ವದಂತಿ ಎಂಬ ಉತ್ತರವನ್ನೇ ನೀಡಿದ್ದಾರೆ.
ಮೂಲಗಳ ಪ್ರಕಾರ ಉದ್ಯಮಿಯನ್ನು ಮದುವೆ ಆಗೋದು ಖಚಿತ ಎನ್ನಲಾಗುತ್ತಿದೆ. ನವೆಂಬರ್ 29ರಂದು ರಮ್ಯಾ ಅವರ ಹುಟ್ಟುಹಬ್ಬದಂದೇ ಮದುವೆ ಆಗಲಿದ್ದಾರೆ ಎನ್ನಲಾಗುತ್ತಿದೆ. ಇದು ಎಷ್ಟರಮಟ್ಟಿಗೆ ನಿಜ ಎಂಬುದನ್ನು ಕಾದು ನೋಡಬೇಕಿದೆ.
