Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ದಶಕಗಳ ಬಳಿಕ ರಾಜ್ಯದಲ್ಲಿ ಜಗತ್ತಿನ ಅಪರೂಪದ ‘ರಾಮ ಸೆಣಬು’ ಪತ್ತೆ!
ಕರ್ನಾಟಕಪ್ರಮುಖ

ದಶಕಗಳ ಬಳಿಕ ರಾಜ್ಯದಲ್ಲಿ ಜಗತ್ತಿನ ಅಪರೂಪದ ‘ರಾಮ ಸೆಣಬು’ ಪತ್ತೆ!

Share
2 Min Read
SHARE

newsics.com

ವಿಜಯನಗರ: ಜಗತ್ತಿನ ಅಪರೂಪದ ‘ರಾಮ ಸೆಣಬು’ ಗಿಡಗಳು ಹೊಸಪೇಟೆ, ಸಂಡೂರಿನ ಬೆಟ್ಟಗಳಲ್ಲಿ ಮತ್ತೆ ಚಿಗುರೊಡೆದು ಗಮನ ಸೆಳೆಯುತ್ತಿವೆ.

ಸಮುದ್ರ ಮಟ್ಟದಿಂದ 1 ಸಾವಿರ ಮೀಟರ್ ಎತ್ತರದಲ್ಲಿರುವ ಈ ಪರ್ವತ ಶ್ರೇಣಿಯಲ್ಲಿ ಅಪರೂಪದ ಜೀವ ವೈವಿಧ್ಯದ ತಾಣವಾಗಿದ್ದು, ರಾಮ ಸೆಣಬು ಬೆಳೆಯುವ ವಿಶ್ವದ ಏಕೈಕ ತಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆದರೆ, ಗಣಿಗಾರಿಕೆ ಅಬ್ಬರದಲ್ಲಿ ನಲುಗಿದ್ದ ಅನೇಕ ಸಸಿಗಳು ಮತ್ತೆ ಜೀವತಳೆಯುತ್ತಿವೆ. ಆ ಪೈಕಿ ‘ರಾಮ ಸೆಣಬು’ ಸುಮಾರು ದಶಕದ ಬಳಿಕ ಮತ್ತೆ ನಳನಳಿಸುತ್ತಿದೆ.

ಈ ಗಿಡದ ಎಲೆಗಳ ಸುತ್ತಲಿನ ರೋಮಗಳು ಸೂರ್ಯರಶ್ಮ್ಮಿಯಂತೆ ಹೊಳೆಯುತ್ತವೆ. ಹಳದಿ ಹೂವು, ಬುರುಡೆಯಂತಿರುವ ಕಾಯಿ, ಹುರುಳಿಯಾಕಾರದ ಬೀಜಗಳನ್ನು ಬಿಡುವ ಈ ಸಸ್ಯ ಸೆಣಬಿನ ವರ್ಗಕ್ಕೆ ಸೇರಿದೆ. ಅಪಾರ ಮಕರಂದವುಳ್ಳ ಈ ಗಿಡ ಚಿಟ್ಟೆ, ಜೇನುನೋಣ ಪ್ರಬೇಧದ ಕೀಟಗಳನ್ನು ಸೆಳೆಯುತ್ತದೆ ಎಂಬುದು ವಿಶೇಷ.

1912ರಲ್ಲಿ ಯುರೋಪ್ ಮೂಲದ ಸಸ್ಯಶಾಸಜ್ಞ ಜೆ.ಎಸ್‌ಗ್ಯಾಂಬೆಲ್ ಅವರು ರಾಮಗಡ ಪರ್ವತದಲ್ಲಿ ಪಸರಿಸಿದ್ದ ಈ ಗಿಡಗಳನ್ನು ಪತ್ತೆ ಮಾಡಿದ್ದರು. ಇತರೆ ಸೆಣಬು ಸಸ್ಯಗಳೊಂದಿಗೆ ಹೋಲಿಸಿದಾಗ ಈ ಪ್ರಬೇಧ ಕೇವಲ ರಾಮಗಡ ಹಾಗೂ ಸುತ್ತಮುತ್ತಲಿನ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದೆ ಎಂದು ನಿರ್ಧರಿಸಿದ್ದರು. ಹೀಗಾಗಿ ಈ ಗಿಡಕ್ಕೆ ‘ಕ್ರೋಟಲೇರಿಯಾ ಸಂಡೂರೆನ್ಸಿಸ್’ ಎಂದು ಕರೆಯಲಾಗಿತ್ತು.

ಇದಕ್ಕೆ ಕನ್ನಡದಲ್ಲಿ ಯಾವುದೇ ಹೆಸರಿಲ್ಲದಿದ್ದರೂ, ‘ರಾಮ ಸೆಣಬು’ ಎಂಬುದು ಇಲ್ಲಿ ಜನಜನಿತ.

ದಶಕಗಳ ಬಳಿಕ ಪತ್ತೆ:
ಹೊಸಪೇಟೆಯ ತುಂಗಭದ್ರಾ ಜಲಾಶಯದ ಪಕ್ಕದಿಂದ ಆರಂಭಗೊಳ್ಳುವ ರಾಮನಮಲೆ ಬೆಟ್ಟ ರಾಯರ ಕೆರೆ ಹಾದಿಯಾಗಿ ಸಂಡೂರಿನ ಸ್ವಾಮಿಹಳ್ಳಿವರೆಗೆ ಸುಮಾರು 48 ಕಿ.ಮೀ. ವ್ಯಾಪಿಸಿದೆ. ಸಂಡೂರು ತಾಲೂಕಿನ ರಾಮಗಡ ರಸ್ತೆಯುದ್ದಕ್ಕೆ, ತಾಯಮ್ಮನಕೊಳ್ಳದಿಂದ ಯಶವಂತನಗರ ಕಣಿವೆ ಪ್ರದೇಶದಲ್ಲಿ ಈಗ ಹೇರಳವಾಗಿ ಕಂಡುಬರುತ್ತಿವೆ.

ಅಕ್ರಮ ಗಣಿಗಾರಿಕೆಗೆ ಕಡಿವಾಣ ಬಿದ್ದ ಬಳಿಕ ಸುಮಾರು ಕಳೆದ ಒಂದು ದಶಕದ ಬಳಿಕ ಈ ವರ್ಷ ‘ರಾಮ ಸೆಣಬು’ ಗಿಡಗಳು ಹೆಚ್ಚಾಗಿ ಕಂಡುಬರುತ್ತಿವೆ.

ಚಳಿಗಾಲದ ಆರಂಭದಲ್ಲಿ ಹೂಬಿಟ್ಟು ಚಳಿಗಾಲದ ಅಂತ್ಯದ ವೇಳೆಗೆ ಬುರುಡೆಯಾಕಾರದ ಕಾಯಿಗಳು ಬಿಡುತ್ತವೆ. ನೆಲಕ್ಕೆ ಬಿದ್ದ ಬೀಜಗಳು ಮತ್ತೆ ಮಳೆಗಾಲದಲ್ಲಿ ಮೊಳಕೆಯೊಡೆದು ಬೆಳೆಯುವುದು ಗಿಡದ ವಿಶೇಷತೆ ಎನ್ನುತ್ತಾರೆ ಡಾ.ಸಮ್ಮದ್ ಕೊಟ್ಟೂರು.

ಈ ಪರ್ವತ ಶ್ರೇಣಿಯಲ್ಲಿ ಸಂಗ್ರಹಿಸಿದ್ದ ರಾಮ ಸೆಣಬು ಬೀಜಗಳನ್ನು ದೂರದ ಕೊಪ್ಪಳದ ಕನಕಗಿರಿ ಕಾಡಿನಲ್ಲಿ ಬೆಳೆಸುವ ಪ್ರಯೋಗ ಮಾಡಿದ್ದು ಫಲಿಸಲಿಲ್ಲ. ಅಪರೂಪದ ಈ ಗಿಡದ ಸಂರಕ್ಷಣೆಗಾಗಿ ಈ ಪರ್ವತ ಶ್ರೇಣಿಯನ್ನು ಜೀವವೈವಿಧ್ಯ ಸಂರಕ್ಷಿತ ತಾಣವನ್ನಾಗಿ ಸರ್ಕಾರ ಘೋಷಿಸಿ, ‘ರಾಮ ಸೆಣಬು’ ಬಗ್ಗೆ ವೈಜ್ಞಾನಿಕ ಅಧ್ಯಯನಗಳು ನಡೆಯಬೇಕು ಎಂದು ವನ್ಯಜೀವಿ ಸಂಶೋಧಕ ಡಾ.ಸಮದ್ ಕೊಟ್ಟೂರು ಆಗ್ರಹಿಸಿದ್ದಾರೆ.

ಗಂಡನ ಶವ ಬಾತ್ ರೂಂನಲ್ಲಿ ಹೂತಿಟ್ಟ ಹೆಂಡತಿ

ಪ್ರತಿ ದಿನ 6 ಗಂಟೆಗಿಂತ ಕಡಿಮೆ ನಿದ್ರೆ ಮಾಡ್ತೀರಾ? ಹಾಗಾದ್ರೆ ಈ ಸಮಸ್ಯೆ ಕಾಡಬಹುದು ಎಚ್ಚರ

ಭಾರತಕ್ಕೆ 5ನೇ ಪದಕ; 10 ಮೀ. ಏರ್ ರೈಫಲ್ನಲ್ಲಿ ಕಂಚು ಗೆದ್ದ ರುಬಿನಾ ಫ್ರಾನ್ಸಿ

TAGGED:After decadesthe world's rare 'Rama jute' was found in the state!
Share This Article
Facebook Twitter Copy Link Print
Previous Article ಗಂಡನ ಶವ ಬಾತ್ ರೂಂನಲ್ಲಿ ಹೂತಿಟ್ಟ ಹೆಂಡತಿ
Next Article ದಿನ ಭವಿಷ್ಯ… 01-09-2024 ಭಾನುವಾರ, ಕರ್ಕಾಟಕ- ದಿಢೀರ್ ಧನ ಲಾಭ, ಸಿಂಹ- ಸ್ಥಿರಾಸ್ತಿ ವಿವಾದ ಇತ್ಯರ್ಥ, ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ?

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?