newsics.com
ಜೈಪುರ: ಬೇರೊಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಹೆಂಡತಿ ತನ್ನ ಪ್ರಿಯಕರನ ಜೊತೆ ಸೇರಿ ಗಂಡನನ್ನು ಕೊಂದಿರುವ ಘಟನೆ ರಾಜಸ್ಥಾನದ ಹನುಮಾನ್‌ಗಢದಲ್ಲಿ ನಡೆದಿದೆ. ಈ ಭೀಕರ ಕೊಲೆ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ
ರೂಪರಾಮ್ 16 ದಿನಗಳಿಂದ ಮನೆಯಿಂದ ನಾಪತ್ತೆಯಾಗಿದ್ದ. ಆತ ಬೇರೆ ಊರಿಗೆ ಹೋಗಿರಬಹುದು ಅಕ್ಕಪಕ್ಕದವರು ಅಂದುಕೊಂಡಿದ್ದರು. ಆದರೆ, ರೂಪರಾಮ್ ನಾಪತ್ತೆಯ ಹಿಂದೆ ಆತನ ಹೆಂಡತಿಯ ಕೈವಾಡವಿರಬಹುದು ಎಂದು ಆತನ ಪೋಷಕರಿಗೆ ಅನುಮಾನ ಬಂದಿತ್ತು. ಹೀಗಾಗಿ, ಈ ಬಗ್ಗೆ ಮೃತ ರೂಪಾರಾಮ್ ಕುಟುಂಬಸ್ಥರು ಠಾಣೆಗೆ ಅರ್ಜಿ ಸಲ್ಲಿಸಿದ್ದರು. ಇಷ್ಟೆಲ್ಲಾ ಆದರೂ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದರಿಂದ ಕೋಪಗೊಂಡ ಕುಟುಂಬಸ್ಥರು ಸ್ಥಳೀಯ ಶಾಸಕರಿಗೆ ಮನವಿ ಸಲ್ಲಿಸಿದ್ದು, ಬಳಿಕ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ.
ಕೊನೆಗೆ ಈ ಬಗ್ಗೆ ತನಿಖೆ ಪ್ರಾರಂಭವಾಯಿತು. ಪೊಲೀಸರು ರೂಪರಾಮ್ ಅವರ ಪತ್ನಿಯನ್ನು ಕರೆಸಿ ವಿಚಾರಣೆ ನಡೆಸಿದಾಗ, ಅವಳು ತನ್ನ ಅಪರಾಧವನ್ನು ಒಪ್ಪಿಕೊಂಡಳು. ರೂಪರಾಮ್ನನ್ನು ಕೊಲೆ ಮಾಡಿ ಆತನ ಶವವನ್ನು ಬಾತ್ ರೂಂನಲ್ಲಿ ಹೂತು ಹಾಕಿದ್ದೇವೆ. ನನ್ನ ಪ್ರಿಯಕರನ ಜೊತೆ ಸೇರಿ ಈ ಕೃತ್ಯ ಎಸಗಿದ್ದೇನೆ ಎಂದು ಹೇಳಿದಳು. ಇದು ಬಹಿರಂಗವಾಗುತ್ತಿದ್ದಂತೆಯೇ ಪೊಲೀಸರು ಮನೆಯಲ್ಲಿದ್ದ ಶೌಚಾಲಯವನ್ನು ಅಗೆದು ರೂಪರಾಮ್ ಶವವನ್ನು ಹೊರತೆಗೆದಿದ್ದಾರೆ.