newsics.com
ಪ್ಯಾರಿಸ್: ಪ್ಯಾರಾಲಿಂಪಿಕ್ಸ್ನ ಎರಡನೇ ದಿನ ಭಾರತದ ಕ್ರೀಡಾಳುಗಳು ಪದಕಗಳ ಭರ್ಜರಿ ಬೇಟೆ ಶುರು ಮಾಡಿದ್ದಾರೆ. ಒಂದೇ ದಿನ ನಾಲ್ಕು ಪದಕ ಬಾಚಿಕೊಂಡಿದ್ದಾರೆ.
ಮಹಿಳಾ 10 ಮೀ. ಏರ್ ರೈಲ್ಸ್ ಸ್ಟಾಂಡಿಂಗ್ ಎಸ್ಎಚ್1 ಫೈನಲ್ನಲ್ಲಿ ಅವನಿ ಲೇಖಾರಾ ಚಿನ್ನ ಗೆದ್ದರೆ, ಮತ್ತೊಬ್ಬ ಆಟಗಾರ್ತಿ ಮೋನಾ ಅಗರ್ವಾಲ್ ಕಂಚು ಮುಡಿಗೇರಿಸಿಕೊಂಡಿದ್ದಾರೆ.
ಪುರುಷರ ವಿಭಾಗದ 10 ಮೀ. ಏರ್ಪಿಸ್ತೂಲ್ ಎಸ್ಎಚ್1 ಫೈನಲ್ನಲ್ಲಿ ಮನೀಶ್ ಅಗರ್ವಾಲ್ ಬೆಳ್ಳಿ ಗೆದ್ದ ಸಾಧನೆ ಮಾಡಿದ್ದಾರೆ.
ಮಹಿಳಾ ವಿಭಾಗದ 100 ಮೀ. ಟಿ35 ವಿಭಾಗದಲ್ಲಿ ಪ್ರೀತಿ ಪಾಲ್ ಕಂಚು ಗೆದ್ದು ದಾಖಲೆ ನಿರ್ಮಿಸಿದ್ದಾರೆ.
ಭಾರತದ ಚಿನ್ನದ ಹುಡುಗಿ ಎಂದೇ ಖ್ಯಾತರಾಗಿರುವ ಅವನಿ ಲೇಖಾರಾ ಅವರು 2020ರ ಟೋಕಿಯೋ ಪ್ಯಾರಾಲಿಂಪಿಕ್ಸ್ನ ಸಾಧನೆಯನ್ನೇ ಇಲ್ಲೂ ಪ್ರದರ್ಶಿಸಿದ್ದಾರೆ.
ಅಲ್ಲಿಯೂ ಚಿನ್ನದ ಪದಕ ಗೆದ್ದಿದ್ದ ಅವನಿ ಲೇಖಾರಾ, ಪ್ಯಾರಿಸ್ ಪ್ಯಾರಾಲಿಂಪಿಕ್ಸ್ನಲ್ಲೂ ಚಿನ್ನ ಗೆದ್ದು ಸಾಧನೆ ಮಾಡಿದ್ದಾರೆ. ಸತತವಾಗಿ ಎರಡು ಪ್ಯಾರಾಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯಳು ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಜತೆಗೆ ಮೂರು ಪದಕ ಗೆದ್ದ ಸಾಧನೆಯನ್ನೂ ಮಾಡಿದ್ದಾರೆ.
ಈ ಪ್ಯಾರಾಲಿಂಪಿಕ್ಸ್ನಲ್ಲಿ ಅವನಿ ಲೇಖಾರಾ 249.7 ಅಂಕಗಳೊಂದಿಗೆ ಗೆದ್ದು ಹೊಸ ದಾಖಲೆಯನ್ನೇ ಬರೆದರು. ಹಿಂದಿನ ದಾಖಲೆ ಟೋಕಿಯೋ ಪ್ಯಾರಾಲಿಂಪಿಕ್ಸ್ನ 249.6 ಅಂಕಗಳಾಗಿತ್ತು.
ಪ್ಯಾರಾಲಿಂಪಿಕ್ಸ್ನ 2ನೇ ದಿನದ ಪಂದ್ಯಾವಳಿಯಲ್ಲಿ ಶೂಟಿಂಗ್ನಲ್ಲಿ ಬಹುದೊಡ್ಡ ಯಶಸ್ಸು ಸಿಕ್ಕಿತು. ಈ ವಿಭಾಗದಲ್ಲೇ ಭಾರತ ಮೂರು ಪದಕ, ಅಂದರೆ ತಲಾ ಒಂದೊಂದು ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದಿದ್ದಾರೆ.
ಪ್ಯಾರಾಲಿಂಪಿಕ್ಸ್ನ ಅಥ್ಲೆಟಿಕ್ಸ್ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಭಾರತದ ಸ್ಪರ್ಧಿಯೊಬ್ಬರು ಪದಕ ಗೆದ್ದು ಸಾಧನೆ ಮಾಡಿದ್ದಾರೆ. ಮಹಿಳೆಯರ 100 ಮೀ. ವಿಭಾಗದಲ್ಲಿ ಪ್ರೀತಿ ಪಲ್ ಅವರು ಕಂಚಿನ ಪದಕ ಗೆಲ್ಲುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಭಾನುವಾರ ನಡೆಯಲಿರುವ 200 ಮೀ. ಟಿ35 ವಿಭಾಗದಲ್ಲಿಯೂ ಪ್ರೀತಿ ಪಲ್ ಸ್ಪರ್ಧಿಸಲಿದ್ದಾರೆ.
ಪ್ಯಾರಾಲಿಂಪಿಕ್ಸ್ನಲ್ಲಿ ಪದಕ ಗೆದ್ದಿರುವ ಅವನಿ ಲೇಖಾರಾ, ಮೋನಾ ಅಗರ್ವಾಲ್, ಪ್ರೀತಿ ಪಲ್ ಮತ್ತು ಮನೀಶ್ ನರ್ವಾಲ್ ಅವರಿಗೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಕಳೆದ ಬಾರಿಯಂತೆಯೇ ಈ ಬಾರಿಯೂ ಚಿನ್ನ ಗೆಲ್ಲುವ ಮೂಲಕ ಅವನಿ ಲೇಖಾರಾ ಸಾಧನೆ ಮಾಡಿದ್ದಾರೆ. ಒಟ್ಟಾರೆಯಾಗಿ ಮೂರು ಪದಕ ಗೆಲ್ಲುವ ಮೂಲಕ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ಅಂಕೋಲಾ ಬಳಿ ಟ್ಯಾಂಕರ್ ಉರುಳಿ ಆ್ಯಸಿಡ್ ಸೋರಿಕೆ, ದಟ್ಟ ಹೊಗೆ, ಹೆಚ್ಚಿದ ಆತಂಕ
ಪುರುಷರಿಗೆ ಅದೊಂದೇ’ ಕೊರತೆ!; ‘ಆ’ ಸಂದರ್ಭದಲ್ಲಿ ಹೆಚ್ಚು ಸಮಯ ಉಳಿಯುವುದು ಹೇಗೆ?