newsics.com
ಮದುವೆ ಮಂಟಪದಲ್ಲಿ ವಧುವಿನ ಮುಂದೆಯೇ ಬೇರೊಬ್ಬಳಿಗೆ ವರ ಮುತ್ತಿಟ್ಟಿದ್ದಾನೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
memesmasala_mix ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಜುಲೈ 23ರಂದು ಹಂಚಿಕೊಂಡಿರುವ ಈ ವಿಡಿಯೋ ಇಲ್ಲಿಯವರೆಗೆ 17.4 ಅಂದರೆ ಒಂದು ಕೋಟಿಗೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.
ವೀಡಿಯೊದಲ್ಲಿ, ವರ ಮತ್ತು ವಧು ವೇದಿಕೆಯಲ್ಲಿ ಕುಳಿತಿರುವಾಗ ಲೆಹೆಂಗಾವನ್ನು ಧರಿಸಿದ ಯುವತಿಯೊಬ್ಬಳು ನೃತ್ಯ ಮಾಡಲು ಪ್ರಾರಂಭಿಸಿದ್ದಾಳೆ. ಬಳಿಕ ವರನ ಬಳಿಗೆ ಬಂದು ಕುಳಿತಿದ್ದು, ಇದ್ದಕ್ಕಿದ್ದಂತೆ, ವರನಿಗೆ ಚುಂಬಿಸಿದ್ದಾಳೆ. ಈ ದೃಶ್ಯ ಕಂಡು ಅಲ್ಲಿದ್ದ ಅತಿಥಿಗಳು ಆಘಾತಕ್ಕೊಳಗಾಗಿದ್ದಾರೆ. ವಧು ಏನು ತಿಳಿಯದಂತೆ ಕುಳಿತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
https://www.instagram.com/reel/C9xaPJmyFQf/?igsh=MWpqYzczYW1kY3J1eQ==