newsics.com
ಬೆಂಗಳೂರು: ಆನ್‌ಲೈನ್ ಫುಡ್ ಡೆಲಿವರಿ ಫ್ಲಾಟ್‌ಫಾರ್ಮ್ ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ಸ್ವಿಗ್ಗಿಗೆ ಈಗ ದಶಕದ ಸಂಭ್ರಮ.
2014ರ ಆಗಸ್ಟ್ 14ರಂದು ಲಾಂಚ್ ಆದ ಸ್ವಿಗ್ಗಿ, ಪ್ರತಿ ವರ್ಷದ ಆಗಸ್ಟ್ ತಿಂಗಳನ್ನು ಸ್ವಿಗ್ಗಿ ಬರ್ತ್‌ಡೇ ಮಂತ್ ಆಗಿ ಆಚರಣೆ ಮಾಡುತ್ತದೆ.
ಈ ವೇಳೆ ಕಂಪನಿ ಸ್ಪೆಷಲ್ ಪ್ರೈಸ್‌ನಲ್ಲಿ ಗ್ರಾಹಕರಿಗೆ ವಿಶೇಷ ಆಹಾರ ಪೂರೈಸುತ್ತದೆ. 19 ರೂಪಾಯಿಯಿಂದ ಇದರ ಆರಂಭವಾಗುತ್ತದೆ. ಕ್ರೇಜಿ ಡೀಲ್ಸ್ ಎನ್ನುವ ಟೈಟಲ್‌ನಲ್ಲಿ ಈ ಆಫರ್‌ಗಳನ್ನು ನೀಡುವ ಸ್ವಿಗ್ಗಿ ಇಡೀ ಆಗಸ್ಟ್ ತಿಂಗಳಲ್ಲಿ ಇದನ್ನು ಚಾಲ್ತಿಯಲ್ಲಿ ಇಡುತ್ತದೆ.
ಬಾಯಲ್ಲಿ ನೀರೂರಿಸುವ ಬಿರಿಯಾನಿಯಿಂದ ಫ್ಲೇವರ್ ಆಗಿರುವ ಮೊಮೋಸ್‌ವರೆಗೆ , ಕ್ರಿಸ್ಪಿ ಸ್ನ್ಯಾಕ್ಸ್‌ನಿಂದ ಡೆಲಿಕೇಟ್ ಡೆಸಾರ್ಟ್‌ವರೆಗೆ ಸ್ವಿಗ್ಗಿಯಲ್ಲಿ ಜಸ್ಟ್ 19 ರೂಪಾಯಿಗೆ ನಿಮಗೆ ಲಭ್ಯವಿದೆ.
ಈ ಡೀಲ್‌ನಲ್ಲಿ ಕಂಪನಿ ವಿವಿಧ ರೀತಿಯ ಫುಡ್ ಐಟಮ್‌ಗಳನ್ನು ಆಫರ್ ಮಾಡುತ್ತಿದೆ. ಇದರಲ್ಲಿ ಸೌತ್ ಇಂಡಿಯನ್ ಫುಡ್ ಕೂಡ ಸೇರಿದ್ದು, ಇದಕ್ಕೆ 79 ರೂಪಾಯಿ. 89 ರೂಪಾಯಿಗೆ ಬರ್ಗರ್ ಸಿಗುತ್ತದೆ. ಕೇಕ್ ಹಾಗೂ ಡೆಸಾರ್ಟ್‌ಗಳು 19 ರೂಪಾಯಿಗೆ ಲಭ್ಯ. ಸ್ನ್ಯಾಕ್ಸ್‌ಗಳು 49 ರೂಪಾಯಿ, ಕಾಂಬೋಸ್‌ಗಳು 99 ರೂಪಾಯಿಯಲ್ಲಿ ಲಭ್ಯವಿರುತ್ತದೆ.
ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡ ಜೋಡಿಯೊಂದು ತಮ್ಮ ಆಫರ್‌ಅನ್ನು ಹೇಗೆ ಬಳಸಿಕೊಂಡಿದ್ದಾರೆ ಅನ್ನೋದನ್ನೂ ಸ್ವಿಗ್ಗಿ ಟ್ವೀಟ್ ಮಾಡಿದೆ.
ಈ ಆಫರ್‌ಅನ್ನು ಪಡೆಯಲು ಗ್ರಾಹಕರು, Swiggy ಅಪ್ಲಿಕೇಶನ್ ಅಥವಾ ವೆಬ್‌ಸೈಟ್‌ಗೆ ಲಾಗ್ ಇನ್ ಆಗಬೇಕಾಗುತ್ತದೆ, ಖಾದ್ಯಗಳನ್ನು ಆಯ್ಕೆ ಮಾಡಿ ಮತ್ತು ಚೆಕ್‌ಔಟ್ ಸಮಯದಲ್ಲಿ ಆದ್ಯತೆಯ ಪ್ರೋಮೋ ಕೋಡ್ ಬಳಸಬೇಕಾಗುತ್ತದೆ.
ಮತ್ತೆ ಭೂಕುಸಿತ: ಬಾಳ್ಳುಪೇಟೆ ಬಳಿಯೇ ನಿಂತ ಬೆಂಗಳೂರು- ಮಂಗಳೂರು ರೈಲು, ಪ್ರಯಾಣಿಕರ ಪರದಾಟ
ಬ್ಲ್ಯಾಕ್ ಬ್ಲೌಸ್ನಲ್ಲಿ ಪಡ್ಡೆ ಹುಡುಗರ ಮನಸಲ್ಲಿ ಕಚಗುಳಿ ಇಟ್ಟ ಸೌತ್ ಬ್ಯೂಟಿ!