ಮತ್ತೆ ಭೂಕುಸಿತ: ಬಾಳ್ಳುಪೇಟೆ ಬಳಿಯೇ ನಿಂತ ಬೆಂಗಳೂರು- ಮಂಗಳೂರು ರೈಲು, ಪ್ರಯಾಣಿಕರ ಪರದಾಟ

newsics.com ಹಾಸನ: ಸಕಲೇಶಪುರ ತಾಲ್ಲೂಕಿನ ಆಚಂಗಿ-ದೊಡ್ಡಸಾಗರ ಬಳಿ ರೈಲ್ವೆ ಹಳಿ ಮೇಲೆ ಭೂಕುಸಿತ ಉಂಟಾಗಿ ಬೆಂಗಳೂರು-ಮಂಗಳೂರು ನಡುವಿನ ರೈಲುಗಳ ಸಂಚಾರ ಸ್ಥಗಿತವಾಗಿದೆ. ಯಶವಂತಪುರ-ಕಾರವಾರ ಎಕ್ಸ್‌ಪ್ರೆಸ್‌ ರೈಲು ಸಂಚಾರದಲ್ಲಿ ಶುಕ್ರವಾರ ವ್ಯತ್ಯಯವುಂಟಾಗಿದೆ. ಕಳೆದ ಒಂದು ವಾರದ ಹಿಂದೆ ಇದೇ ಜಾಗದಲ್ಲಿ ರೈಲ್ವೆ ಹಳಿ ಮೇಲೆ ಮಣ್ಣು ಕುಸಿದಿತ್ತು. ಮಣ್ಣು ತೆರವು ಕಾರ್ಯಾಚರಣೆ ಮುಗಿದು ರೈಲ್ವೆ ಸಂಚಾರ ಆರಂಭವಾದ ಬಳಿಕ ಇದೀಗ ಮತ್ತೆ ಮಣ್ಣು ಕುಸಿದು ಯಶವಂತಪುರ-ಕಾರವಾರ ಎಕ್ಸ್‌ಪ್ರೆಸ್‌ ರೈಲು ಕಳೆದ ಎರಡು ಗಂಟೆಯಿಂದ ಬಾಳ್ಳುಪೇಟೆ ಬಳಿ ನಿಂತಿದೆ. ವರಮಹಾಲಕ್ಷ್ಮೀ … Continue reading ಮತ್ತೆ ಭೂಕುಸಿತ: ಬಾಳ್ಳುಪೇಟೆ ಬಳಿಯೇ ನಿಂತ ಬೆಂಗಳೂರು- ಮಂಗಳೂರು ರೈಲು, ಪ್ರಯಾಣಿಕರ ಪರದಾಟ