newsics.com
ಬೆಂಗಳೂರು: ಸವದತ್ತಿ ಪಟ್ಟಣದಲ್ಲಿ ಕುಕ್ಕರ್ ಸ್ಫೋಟ ಗೊಂಡು 9 ಜನರಿಗೆ ಗಾಯವಾಗಿದೆ.
ಯಲ್ಲಮ್ಮ ದೇವಿ ದರ್ಶನಕ್ಕೆ ಬಂದಿದ್ದ ಯಾದಗಿರಿಯ ಐವರು ಹಾಗೂ ಬೆಂಗಳೂರಿನ ನಾಲ್ವರಿಗೆ ಗಾಯವಾಗಿದೆ. ಗಂಭೀರ ಗಾಯಗೊಂಡ ಇಬ್ಬರು ಮಹಿಳೆಯರಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಉಳಿದ 7 ಜನರಿಗೆ ಸವದತ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸವದತ್ತಿ ಪಟ್ಟಣದ ಹೋಟೆಲ್ನಲ್ಲಿ ಒಂದು ಹಾಲ್ ರೀತಿಯ ರೂಮ್ ಪಡೆದು ಎಲ್ಲ ಭಕ್ತರು ಅಲ್ಲೇ ಅಡುಗೆ ಮಾಡುತ್ತಿದ್ದರು. ಹೋಳಿಗೆ ಮಾಡಲು ಕುಕ್ಕರ್ನಲ್ಲಿ ಬೇಳೆ ಬೇಯಿಸುವಾಗ ಕುಕ್ಕರ್ ಸ್ಫೋಟವಾಗಿದೆ. ಕೂಡಲೇ ಗಾಯಾಳು ಭಕ್ತರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಕುಕ್ಕರ್ ಸ್ಫೋಟಗೊಂಡು ಹೋಟೆಲ್ಗೆ ಬೆಂಕಿ ಆವರಿಸಿದ್ದು, ತಕ್ಷಣ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ್ದಾರೆ.