newsics.com
ಅವಲಕ್ಕಿಗೂ ನಮ್ಮ ನೆಲಕ್ಕೂ ಮಹಾಭಾರತದ ಕಾಲದಿಂದಲೂ ಒಂದು ಬಂಧವಿದೆ. ಶತಮಾನಗಳಿಂದಲೂ ನಮ್ಮ ದೇಶದೊಂದಿಗೆ ನಂಟು ಹೊಂದಿರುವ ಈ ಅವಲಕ್ಕಿಯಲ್ಲಿ ಅಪರೂಪದ ಔಷಧೀಯ ಗುಣಗಳಿವೆ.
ಅವಲಕ್ಕಿಯನ್ನು ಅಕ್ಕಿಯಿಂದಲೇ ತಯಾರು ಮಾಡಿದ್ದರೂ, ಇದು ಸಕ್ಕರೆ ಕಾಯಿಲೆಯವರು ತಿನ್ನಬಹುದಾದ ಅಹಾರ. ನೆನೆಸಿ ಒಗ್ಗರಣೆ ಕೊಟ್ಟು ಮಾಡಿದ ಅವಲಕ್ಕಿ ತಿನ್ನುವುದರಿಂದ ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವವರಿಗೆ ಇದು ಅಪಾಯಕಾರಿಯಲ್ಲ. ಇದರ ಇನ್ನೊಂದು ಅನುಕೂಲವೆಂದರೆ, ಆರಾಮಾಗಿ ಜೀರ್ಣವಾಗುತ್ತದೆ. ಕಾರ್ಬೋಹೈಡ್ರೇಡ್ಸ್ ಪ್ರಮಾಣ ಹೆಚ್ಚು ಇರುತ್ತದೆ. ಕ್ಯಾಲರೀಸ್ ಕಡಿಮೆ ಇರುವ ಪದಾರ್ಥ ಅವಲಕ್ಕಿ. ವಿಟಮಿನ್ ಸಿ ಹಾಗೂ ಆ್ಯಂಟಿಆಕ್ಷಿಡೆಂಟ್ಸ್ ಅಂಶಗಳು ಇರುತ್ತವೆ.
ಪ್ರಮುಖವಾಗಿ ಇದು ಕೊಬ್ಬುರಹಿತ ಆಹಾರ. ಬ್ಲಡ್ ಶುಗರ್ ನಿಯಂತ್ರಣ ಮಾಡುವುದರಲ್ಲಿ ಅವಲಕ್ಕಿ ತುಂಬಾ ಸಹಾಯಕಾರಿ ಎಂದು ವೈದ್ಯರು ಹೇಳುತ್ತಾರೆ. ಇದು ಶುಗರ್ ಏರಿಕೆಯನ್ನು ಕಡಿಮೆ ಮಾಡುವಲ್ಲಿ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ಎಣ್ಣೆ ಮತ್ತು ತರಕಾರಿ ಹಾಕಿ ಮಾಡಿದ ಅವಲಕ್ಕಿ ಬ್ಲಡ್ ಶುಗರ್ ಕಡಿಮೆ ಮಾಡುವುದರಲ್ಲಿ ಸಹಕಾರಿ ಎಂದು 2022ರಲ್ಲಿ ಬಿಡುಗಡೆಯಾದ ಒಂದು ಅಧ್ಯಯನ ಹೇಳಿದೆ.
ನ್ಯಾಷನಲ್ ಹೆಲ್ತ್ ಮಿಷನ್ ಹೇಳುವ ಪ್ರಕಾರ, ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವವರು ಅವಲಕ್ಕಿ ಸೇವಿಸುವುದರಿಂದ ಯಾವುದೇ ತೊಂದರೆಯಿಲ್ಲ ಎಂದು ಹೇಳಿದೆ.