newsics.com
ಒಬ್ಬ ವ್ಯಕ್ತಿ ತನ್ನ ಮೊಬೈಲ್ ಫೋನ್ ಅನ್ನು ಹೇಗೆ ಹಿಡಿದುಕೊಳ್ಳುತ್ತಾನೆ ಎಂಬುದರ ಮೂಲಕ ಅವನ ವ್ಯಕ್ತಿತ್ವವನ್ನು ಗುರುತಿಸಬಹುದು ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ.
ಸಾಮಾನ್ಯವಾಗಿ ಮೊಬೈಲ್ ಪರಸ್ಪರ ಸಂವಹನ ನಡೆಸಲು, ಚಾಟ್ ಮಾಡಲು, ಇಂಟರ್ನೆಟ್ ಬಳಸಿ ಮಾಹಿತಿ ಪಡೆಯಲು ಬಳಸಲಾಗುತ್ತದೆ ಎಂದು ಎಲ್ಲರಿಗೂ ತಿಳಿದಿದೆ. ಆದರೆ ನಾವು ಮೊಬೈಲ್ ಅನ್ನು ಹೇಗೆ ಹಿಡಿದಿಟ್ಟುಕೊಳ್ಳುತ್ತೇವೆ ಎಂಬುದು ನಮ್ಮ ಗುಣ, ಸ್ವಭಾವಗಳು, ದೋಷಗಳು ಮತ್ತು ಒಟ್ಟಾರೆ ವ್ಯಕ್ತಿತ್ವವನ್ನು ಹೇಳುತ್ತದೆ ಎನ್ನಲಾಗಿದೆ.
ನೀವು ಫೋನ್ ಅನ್ನು ಎರಡೂ ಕೈಗಳಲ್ಲಿ ಹಿಡಿದು ಒಂದು ಕೈಯ ಹೆಬ್ಬೆರಳಿನಿಂದ ಬಳಸಿದರೆ, ನೀವು ಎಚ್ಚರಿಕೆ ಮತ್ತು ಸಹಾನುಭೂತಿ ಹೊಂದಿರುವ ವ್ಯಕ್ತಿ. ನೀವು ಇತರರ ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತೀರಿ ಮತ್ತು ಆತಂಕಗಳಿಂದ ರಕ್ಷಿಸಲು ಪ್ರಯತ್ನಿಸುತ್ತೀರಿ. ನೀವು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ತುಂಬಾ ಆಲೋಚಿಸಿ ತೆಗೆದುಕೊಳ್ಳುತ್ತೀರಿ ಮತ್ತು ಇತರರಿಗೆ ಸಪೋರ್ಟಿವ್ ಆಗಿರುತ್ತೀರಿ.
ಒಂದು ಕೈಯಿಂದ ಫೋನ್ ಹಿಡಿದು ಅದೇ ಕೈಯ ಹೆಬ್ಬೆರಳಿನಿಂದ ಮೊಬೈಲ್ ಆಪರೇಟ್ ಮಾಡಿದರೆ ನೀವು ನಿರಾತಂಕ ಮತ್ತು ಆತ್ಮವಿಶ್ವಾಸ ಹೊಂದಿರುವ ವ್ಯಕ್ತಿ ಆಗಿದ್ದೀರಿ. ನೀವು ಜೀವನದ ಸವಾಲುಗಳನ್ನು ಸುಲಭವಾಗಿ ಸ್ವೀಕರಿಸುತ್ತೀರಿ ಮತ್ತು ಹೊಸ ಅವಕಾಶಗಳ ಲಾಭವನ್ನು ಪಡೆಯಲು ಯಾವಾಗಲೂ ಸಿದ್ಧರಾಗಿರುತ್ತೀರಿ. ಆದರೆ ಕೆಲವೊಮ್ಮೆ ನೀವು ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು.
ನೀವು ಫೋನ್ ಅನ್ನು ಎರಡೂ ಕೈಗಳಿಂದ ಹಿಡಿದು ಎರಡೂ ಹೆಬ್ಬೆರಳುಗಳಿಂದ ಅದನ್ನು ನಿರ್ವಹಿಸಿದರೆ, ನೀವು ಶಕ್ತಿಯುತ ಮತ್ತು ಉತ್ತಮ ಪ್ರತಿಸ್ಪರ್ಧಿ. ಆಲೋಚಿಸುವುದರಲ್ಲಿ ನೀವು ಚುರುಕಾಗಿರುತ್ತೀರಿ ಮತ್ತು ಹೊಸ ಸವಾಲುಗಳನ್ನು ತೆಗೆದುಕೊಳ್ಳಲು ಸಿದ್ಧರಿದ್ದೀರಿ. ನೀವು ಸಾಮಾಜಿಕ ಮತ್ತು ಜನಪ್ರಿಯರಾಗಿರುತ್ತೀರಿ. ಆದರೆ, ಕೆಲವೊಮ್ಮೆ ನೀವು ಹೆಚ್ಚಾಗಿ ಮೇಲಿನ ಕೆಲಸಗಳನ್ನು ಮಾಡಲು ಪ್ರಯತ್ನಿಸುತ್ತೀರಿ.
ಮೊಬೈಲ್ ಹಿಡಿದುಕೊಳ್ಳುವುದು ಅವರವರ ಅನುಕೂಲಕ್ಕೆ ಸಂಬಂಧಿಸಿದ್ದು. ಇದರಿಂದಲೇ ವ್ಯಕ್ತಿಯ ಸಂಪೂರ್ಣ ವ್ಯಕ್ತಿತ್ವವನ್ನು ಅಧ್ಯಯನದಿಂದ ಅಳೆಯುವುದು ಸಾಧ್ಯವಿಲ್ಲ. ಹೀಗಾಗಿ ಇದನ್ನು ಆಸಕ್ತಿದಾಯಕ ಮಾಹಿತಿ ಎಂದು ಪರಿಗಣಿಸಬಹುದು.