newsics.com
ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಗುಡ್ಡದಭೂತ ಮರಣಮೃದಂಗ ಬಾರಿಸಿದ್ದು ಸಾವಿನ ಸಂಖ್ಯೆ 143ಕ್ಕೆ ದಾಟಿದೆ. ಸಾವಿನ ಸುರಿ ಮಳೆಯಲ್ಲಿ ಬದುಕುಳಿದವರು ಹೋರಾಟ ನಡೆಸ್ತಿದ್ದಾರೆ. ಕೆಸರು ಮಿಶ್ರಿತ ಪ್ರವಾಹದಲ್ಲಿ ಕಣ್ಮರೆಯಾದವರಿಗಾಗಿ ಹುಡುಕಾಟ ಮುಂದುವರಿದಿದೆ. ಜಲಪ್ರಳಯದಿಂದ ಪರಿಸ್ಥಿತಿ ಅಯೋಮವಾಗಿದೆ.
ಇರುಳು ಆವರಿಸಿ ಜನ ಗಾಢ ನಿದ್ರೆಯಲ್ಲಿರುವಾಗಲೇ ಮಳೆ, ಭೂಕುಸಿತದ ರೂಪದಲ್ಲಿ ಯಮಪಾಶ ಹಾಕಿದೆ. ಒಂದು ರಾತ್ರಿ ಮೂರು ಬಾರಿಯ ಗುಡ್ಡದ ಭೂತ ಸಾವಿನ ಸುರಿಮಳೆ ಸುರಿಸಿದೆ. ಮೆಪ್ಪಾಡಿಯ ಬೆಟ್ಟಪ್ರದೇಶದ ಮುಂಡಕೈ, ಅಟ್ಟಾಮಲೈ, ಚೂರಲ್‌ಮಲಾದಲ್ಲಿ ಮನೆ, ಮಠ, ಮಂದಿರ, ಶಾಲೆಗಳನ್ನು ನಾಮಾವಶೇಷ ಮಾಡಿದೆ. ಒಂದೇ ರಾತ್ರಿಯಲ್ಲಿ ಇಡೀ ಊರಿಗೇ ಊರೇ ಜಲಸಮಾಧಿಯಾಗಿದೆ. ದುರಂತದಲ್ಲಿ ಇದುವರೆಗೂ 143ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಸಾವಿನ ಸಂಖ್ಯೆ ಕ್ಷಣಕ್ಷಣಕ್ಕೂ ಏರಿಕೆಯಾಗ್ತಿದೆ.