newsics.com
ನಿತ್ಯ ಹೆಚ್ಚಾಗುತ್ತಿರುವ ಕೆಲಸದ ಒತ್ತಡ, ಕುಟುಂಬದ ಜವಾಬ್ದಾರಿಗಳು ಚೀನಾ ಯುವ ಸಮುದಾಯವನ್ನು ಬೇರೆ ದಿಕ್ಕಿನೆಡೆಗೆ ಕರೆದುಕೊಂಡು ಹೋಗುತ್ತಿವೆ. ಯುವಕರಲ್ಲಿ ಬೇರೆಯದ್ದೆ ಟ್ರೆಂಡ್ ಸೃಷ್ಟಿ ಮಾಡುತ್ತಿದೆ. ಅವರು ಕಂಡುಕೊಂಡ ಹೊಸ ಟ್ರೆಂಡ್ ಈಗ ದೊಡ್ಡ ಸದ್ದು ಮಾಡುತ್ತಿದೆ. ಅಪ್ಪುಗೆ ಮತ್ತು ಕಿಸ್ಗಾಗಿ ಇಷ್ಟಿಷ್ಟು ರೇಟ್ ಫಿಕ್ಸ್ ಮಾಡಿಕೊಂಡು ಹುಡುಗಿಯರು ಬೋರ್ಡ್ ಹಿಡಿದುಕೊಂಡು ರಸ್ತೆಗಳಲ್ಲಿ ನಿಲ್ಲುತ್ತಿದ್ದಾರೆ. ಅದನ್ನು ಈಗ ಸ್ಟ್ರೀಟ್ ಗರ್ಲ್ಫ್ರೆಂಡ್ ಎಂದೇ ಕರೆಯಲಾಗುತ್ತಿದೆ. ಮೊದಲು ಇದು ಏಪ್ರಿಲ್ 2023ರಂದು ಶುರುವಾಗಿತ್ತು. ಆಗ ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಸುದ್ದಿ ಮಾಡಿ ಸೈಲೆಂಟ್ ಆಗಿತ್ತು. ಆದ್ರೆ ಅದು ಈಗ ದೊಡ್ಡ ಟ್ರೆಂಡ್ ಆಗಿ ಬದಲಾಗಿದೆ.
ಚೀನಾದ ಒಂದು ಯುವನ್ಗೆ ಒಂದು ಅಪ್ಪುಗೆ 10 ಯುವನ್ಗೆ ಒಂದು ಕಿಸ್ ಎಂದು ಬೋರ್ಡ್ ಹಿಡಿದುಕೊಂಡು ಹುಡುಗಿಯರು ನಿಲ್ಲುತ್ತಿದ್ದಾರೆ.ಇಲ್ಲಿ ವಿವಿಧ ಸೇವೆಗೆ ವಿವಿಧ ಬೆಲೆಯನ್ನು ಪಾವತಿಸಬೇಕಾಗುತ್ತದೆ. ಅಪ್ಪುಗೆಗೆ 11 ರೂಪಾಯಿ (1 ಯುವಾನ್), ಕಿಸ್‌ಗೆ 110 ರೂ. (10 ಯುವಾನ್), ಜೊತೆಯಾಗಿ ಫಿಲ್ಮ್ ನೋಡಲು 150 ರೂ. (15 ಯುವಾನ್) ಪಾವತಿಸಬೇಕಾಗುತ್ತದೆ. ಯಾರಾದರೂ ಮನೆಕೆಲಸಗಳನ್ನು ಸ್ಟ್ರೀಟ್ ಗರ್ಲ್‌ಫ್ರೆಂಡ್ ಜೊತೆಯಾಗಿ ಮಾಡಲು ಬಯಸಿದೆ ಅವರು 2000 ರೂ. (20 ಯುವಾನ್) ಪಾವತಿ ಮಾಡಬೇಕಾಗುತ್ತದೆ. ಸ್ಟ್ರೀಟ್ ಗರ್ಲ್‌ಫ್ರೆಂಡ್ ಸುದ್ದಿ ಇದೀಗ ಸಖತ್ ವೈರಲ್ ಆಗುತ್ತಿದ್ದು, ಪ್ರೀತಿಯನ್ನೂ ಮಾರಾಟಕ್ಕೆ ಇಟ್ಟಾಯ್ತು, ಇನ್ನೇನೇನು ನಡೆಯುತ್ತೋ ದೇವ್ರೇ ಬಲ್ಲ ಎಂದು ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ.
ಪ್ರೆಡೆಸ್ಟ್ರೀಯನ್ ಸ್ಟ್ರೀಟ್ನಲ್ಲಿ ಸಾಲಾಗಿ ಅಂಗಡಿಗಳನ್ನೆ ತೆಗೆದಿರುವ ಯುವತಿಯರು ಈ ರೀತಿ ಆಫರ್ಗಳನ್ನು ಹುಡುಗರಿಗೆ ನೀಡುತ್ತಿದ್ದಾರೆ. ಮನೆ ಕೆಲಸಗಳನ್ನು ಮಾಡುವುದರಿಂದ ಹಿಡಿದು, ಜೊತೆಗೆ ಬಂದು ಬಾರ್ನಲ್ಲಿ ಕುಡಿಯುವದಕ್ಕೆ ಕಂಪನಿ ಕೊಡಲು ಸಹ ಒಂದು ರೇಟ್ ಫಿಕ್ಸ್ ಆಗಿದೆ.