newsics. Com
ಬೆಂಗಳೂರು : ಕೊಲೆ ಕೇಸ್ ನಲ್ಲಿ ಸಿಲುಕಿಕೊಂಡು ವಿಚಾರಣಾಧೀನ ಖೈದಿಯಾಗಿ ಜೈಲು ಸೇರಿರುವ ನಟ ದರ್ಶನ್, ನಾಲ್ಕು ಗೋಡೆಗಳ ನಡುವೆ ನೊಂದಿದ್ದಾರೆ ಎನ್ನಲಾಗ್ತಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಸೇರಿರುವ ನಟ ದರ್ಶನ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ ಎನ್ನಲಾಗ್ತಿದೆ. ಖಿನ್ನತೆಯಿಂದ ಹೊರ ಬರಲು ನಟ ದರ್ಶನ್ ಜೈಲಿನಲ್ಲಿ ಯೋಗದ ಮೊರೆ ಹೋಗಿದ್ದಾರಂತೆ.
ಜೈಲಲ್ಲಿ ಒಬ್ಬಂಟಿಯಾಗಿರುವ ನಟ ದರ್ಶನ್ ಅವರನ್ನು ಒಂಟಿತನ ಕಾಡುತ್ತಿದೆ. ಸದಾ ಸೈಲೆಂಟ್ ಆಗಿರುವ ದರ್ಶನ್ ಕುಗ್ಗಿದ್ದಾರೆ. ಮಾನಸಿಕ ಖಿನ್ನತೆಯಿಂದ ಹೊರಬರಲು ನಟ ದರ್ಶನ್ ಯೋಗದ ಮೊರೆ ಹೋಗಿದ್ದಾರೆ ಎನ್ನಲಾಗ್ತಿದೆ.
ಬೇಸರದಲ್ಲಿ ಕುಗ್ಗಿರುವ ದರ್ಶನ್ ಸದಾ ಒಬ್ಬರೇ ಕುಳಿತಿರುತ್ತಾರಂತೆ. ಅಷ್ಟೇ ಅಲ್ಲದೇ ಅವರು ಪುಸ್ತಕಗಳ ಕೇಳಿ ಪಡೆದು ಓದುತ್ತಿದ್ದಾರೆ. ಒಂಟಿತನದಿಂದ ಹೊರ ಬರಲು ಪುಸ್ತಕಗಳ ಮೊರೆ ಹೋಗಿದ್ದಾರೆ.