newsics.com
ಬೆಂಗಳೂರು: ನಮ್ಮ ಮೆಟ್ರೋದ ಉದ್ಘೋಷಣೆಗಳ ಹಿಂದಿನ ಧ್ವನಿಯಾಗಿದ್ದ ಅಪರ್ಣಾ ವಸ್ತಾರೆ ಅವರ ಧ್ವನಿಯನ್ನೇ ಮುಂಬರುವ ಮೆಟ್ರೋ ಮಾರ್ಗಗಳಲ್ಲೂ ನೀಡುವ ಕುರಿತು ಚಿಂತನೆ ನಡೆದಿದೆ.
ಮುಂಬರುವ ಮೆಟ್ರೋ ಹಳದಿ ಮಾರ್ಗಕ್ಕೆ ಅವರ ಧ್ವನಿಯನ್ನೇ ಬಳಸಿಕೊಳ್ಳುವ ಕುರಿತು ಚಿಂತನೆ ನಡೆದಿದೆ ಎಂದು ವರದಿಯೊಂದು ತಿಳಿಸಿದೆ.
ಶ್ವಾಸಕೋಶ ಕ್ಯಾನ್ಸರ್‌ನಿಂದ ಗುರುವಾರ ರಾತ್ರಿ ಕೊನೆಯುಸಿರೆಳೆದ ಖ್ಯಾತ ನಿರೂಪಕಿ ಅಪರ್ಣಾ ಅವರ ಧ್ವನಿಯನ್ನು ಕೃತಕ ಬುದ್ಧಿಮತ್ತೆ ಅಥವಾ ಎಐ ತಂತ್ರಜ್ಞಾನದ ಮೂಲಕ ನಮ್ಮ ಮೆಟ್ರೊದ ಹಳದಿ ಮಾರ್ಗದಲ್ಲೂ ಅಳವಡಿಸಿಕೊಳ್ಳುವ ಕುರಿತಂತೆ ಚಿಂತನೆ ನಡೆದಿದೆ ಎಂದು ವರದಿ ತಿಳಿಸಿದೆ.
ನಮ್ಮ ಮೆಟ್ರೋಗೆ ಧ್ವನಿಯಾಗಿದ್ದ ಅಪರ್ಣಾ ಅವರಿಗೆ ಬಿಎಂಆರ್ ಸಿಲ್ ಕೂಡ ಶ್ರದ್ಧಾಂಜಲಿ ಅರ್ಪಿಸಿದೆ. ಅದೆಷ್ಟೋ ಮೆಟ್ರೋ ಕಾರ್ಯಕ್ರಮಗಳನ್ನು ನಡೆಸಿಕೊಟ್ಟ ಹೆಗ್ಗಳಿಕೆ ಅಪರ್ಣಾರದ್ದು. ಅವರಿಗೆ ಭಾಷೆಯ ಮೇಲಿನ ಹಿಡಿತ ಮತ್ತು ಉಚ್ಛಾರಣೆ ಎರಡೂ ಕರಗತವಾಗಿತ್ತು. ಇವರ ಧ್ವನಿ ನಮ್ಮ ಮೆಟ್ರೋವಿನಲ್ಲಿ ಎಂದೆಂದಿಗೂ ಜೀವಂತ. ಮುಂದಿನ ಬಾರಿ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವಾಗ ಕಣ್ಣು ಮುಚ್ಚಿ ಅವರ ಸ್ಪಷ್ಟ ಕನ್ನಡದ ಸವಿ ಸವಿಯಿರಿ ಎಂದು ಬಿಎಂಆರ್ ಸಿಎಲ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ ಧನ್ಯವಾದ ಅರ್ಪಿಸಿದೆ.
ಅಪರ್ಣಾಗೆ ವಾಯ್ಸ್ ಅನೌನ್ಸ್ ಮೂಲಕ ನಮ್ಮ ಮೆಟ್ರೋ ಶ್ರದ್ಧಾಂಜಲಿ, ಎಂದೆಂದಿಗೂ ನಿಮ್ಮ ಧ್ವನಿ ಜೀವಂತ…
ನನ್ನ ನೋವು, ನೋವಿನ ಮುಖ ಯಾರಿಗೂ ತಿಳಿಯುವುದು ಬೇಡ ಎಂದಿದ್ದರು ಅಪರ್ಣಾ…
ಮಾತಿನ ಮಂಟಪ ಕಟ್ಟುತ್ತಿದ್ದ ಶುದ್ಧ ಕನ್ನಡತಿ… ಅಪರ್ಣಾ ಮೆಲುಮಾತು ಕರ್ಣಾನಂದ…
ಆನೆಯ ಡೆಡ್ಲಿ ಅಟ್ಯಾಕ್‌ನಿಂದ ಬೇಲೂರಿನ ವ್ಯಕ್ತಿ ಪಾರು: ವಿಡಿಯೊ ಭಾರೀ ವೈರಲ್