newsics.com/ನ್ಯೂಸಿಕ್ಸ್
ದರ್ಶನ್ ಜೈಲು ಸೇರಿ ಒಂದು ವರ್ಷ ಪೂರ್ಣಗೊಳ್ಳುತ್ತಿರುವ ಸಂದರ್ಭದಲ್ಲೂ ಅವರ ಅಭಿಮಾನಿಗಳ ಬೆಂಬಲ ಮಾತ್ರ ಕಡಿಮೆಯಾಗಿಲ್ಲ. ಹೀಗಿರುವಾಗ ನಟ ದರ್ಶನ್ ಹಳೆಯ ವಿಡಿಯೋ ಒಂದು ಮತ್ತೆ ವೈರಲ್ ಆಗ್ತಿದೆ.
ಸದ್ಯ ಹರಿದಾಡುತ್ತಿರುವ ಹಳೆಯ ವಿಡಿಯೋ ಯಾವ ಸಂದರ್ಭದ್ದು ಎಂಬುದು ಸ್ಪಷ್ಟವಾಗಿಲ್ಲ. ಆದರೂ, ಅದರಲ್ಲಿ ದರ್ಶನ್ ತಮ್ಮ ಅಭಿಮಾನಿಗಳ ಬಗ್ಗೆ ಅತ್ಯಂತ ಭಾವುಕರಾಗಿ ಮಾತನಾಡಿರುವುದು ಕಾಣಿಸುತ್ತದೆ.
ಅನೇಕ ಅಭಿಮಾನಿಗಳು ತಮ್ಮ ನೆಚ್ಚಿನ ನಟ ಶೀಘ್ರದಲ್ಲೇ ಮತ್ತೆ ಚಿತ್ರರಂಗಕ್ಕೆ ಮರಳಲಿದ್ದಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ. “ನಮ್ಮ ಬಾಸ್ ಎಲ್ಲಿದ್ದರೂ ಬಾಸೇ” ಎಂಬ ಮಾತನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳು ತಮ್ಮ ಬೆಂಬಲವನ್ನು ವ್ಯಕ್ತಪಡಿಸುತ್ತಿದ್ದಾರೆ.
ಮತ್ತೆ ವೈರಲ್ ಆದ ದರ್ಶನ್ ಹಳೆಯ ವಿಡಿಯೋ
ದರ್ಶನ್ ಅವರ ಹಳೆಯ ವಿಡಿಯೋವೊಂದು ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ಯಾವ ಸಂದರ್ಭದಲ್ಲಿ ಚಿತ್ರೀಕರಿಸಲಾಗಿದೆ ಎಂಬುದು ಸ್ಪಷ್ಟವಾಗದಿದ್ದರೂ, ಅಭಿಮಾನಿಗಳು ಅದನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಜೊತೆಗೆ ನಟ ದರ್ಶನ್ ಗೆ ಅಪಾರ ಹೆಸರು ತಂದು ಕೊಟ್ಟ ಕಲಾಸಿಪಾಳ್ಯ ಸಿನಿಮಾ ಮತ್ತೆ ತೆರೆ ಮೇಲೆ ಬರಲಿದೆ ಎಂಬ ಮಾತು ಕೂಡಾ ಕೇಳಿಬರುತ್ತಿದೆ. ಇದೇ ರೀತಿಯ ಪರಿಸ್ಥಿತಿಯಲ್ಲಿ 2011ರಲ್ಲಿ ತೆರೆಕಂಡ ಸಾರಥಿ ಚಿತ್ರ, ದರ್ಶನ್ ಜೈಲಿನಲ್ಲಿದ್ದಾಗಲೇ ರಿಲೀಸ್ ಆಗಿ ಬಹಳಷ್ಟು ಯಶಸ್ಸನ್ನು ಕಂಡಿತ್ತು.ಇದೀಗ ಮತ್ತೆ ಅದೇ ರೀತಿಯ ಘಟನೆ ಮರುಕಳಿಸುತ್ತಾ ಎಂಬುದನ್ನು ನೋಡಬೇಕಿದೆ.
https://www.instagram.com/reel/DZGrbuTzR1d/?igsh=MWk4OXo5eWU5eXh4bw==
ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?